Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೋಕದ ಚೇಷ್ಟೆಗೆ ರವಿ ಬೀಜ

ಲೋಕದ ಚೇಷ್ಟೆಗೆ ರವಿ ಬೀಜ

ರಂಜಾನ್ ದರ್ಗಾರಂಜಾನ್ ದರ್ಗಾ20 Feb 2018 12:17 AM IST
share
ಲೋಕದ ಚೇಷ್ಟೆಗೆ ರವಿ ಬೀಜ

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,

ಕರಣಂಗಳ ಚೇಷ್ಟೆಗೆ ಮನವೇ ಬೀಜ.

ಎನಗುಳ್ಳುದೊಂದು ಮನ.

ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ

ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ.

                              -ಅಕ್ಕ ಮಹಾದೇವಿ

  ಸೂರ್ಯ ಇಲ್ಲದೆ ಈ ಜಗತ್ತನ್ನು ಕಲ್ಪಿಸಲಿಕ್ಕಾಗದು. ಸೂರ್ಯ ಇದ್ದಾನೆಂದೇ ಸಸ್ಯಲೋಕ, ಪ್ರಾಣಿಲೋಕ ಮತ್ತು ಮಾನವಲೋಕಗಳು ಜೀವಂತವಾಗಿವೆ. ಜಗತ್ತಿನ ಎಲ್ಲ ಪ್ರಕ್ರಿಯೆಗಳಿಗೆ ಸೂರ್ಯನೇ ಮೂಲಕಾರಣವಾಗಿದ್ದಾನೆ ಎಂಬುದು ವೈಜ್ಞಾನಿಕ ಸತ್ಯ. ಪ್ರತಿಯೊಂದು ಜೀವಿಯ ಬದುಕಿಗೂ ಸೂರ್ಯ ಬೇಕೇಬೇಕು. ಅಂತೆಯೇ ಜಗತ್ತಿನ ಎಲ್ಲ ಚಟುವಟಿಕೆಗಳಿಗೆ ಸೂರ್ಯನೇ ಮೂಲವಾಗುತ್ತಾನೆ. ಅದೇ ರೀತಿ ಕರಣಗಳ ವರ್ತನೆಗೆ ಮನವೇ ಮೂಲಕಾರಣವಾಗುತ್ತದೆ.

ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳ ಜ್ಞಾನ ಕೊಡುವ ಕಿವಿ, ಚರ್ಮ, ಕಣ್ಣು, ನಾಲಗೆ ಮತ್ತು ಮೂಗು ಎಂಬ ಪಂಚಜ್ಞಾನೇಂದ್ರಿಯಗಳೇ ಪಂಚಕರಣೇಂದ್ರಿಯಗಳು. ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ ಎಂಬ ಈ ನಾಲ್ಕು ಅಂತರಿಂದ್ರಿಯಗಳಿಗೆ ಅಂತಃಕರಣ ಚತುಷ್ಟಯ ಎನ್ನುತ್ತಾರೆ. ಕಾಯ, ವಾಕ್ಕು (ನುಡಿ) ಮತ್ತು ಮನಸ್ಸಿಗೆ ತ್ರಿಕರಣಗಳೆನ್ನುತ್ತಾರೆ. ಕಾಯವಿಕಾರ ಮತ್ತು ಮನೋವಿಕಾರಗಳಿಗೆ ಕರಣೇಂದ್ರಿಯಗಳೇ ಕಾರಣವಾಗಿವೆ. ಇದು ಮನೋವೈಜ್ಞಾನಿಕ ಸತ್ಯ. ಕರಣೇಂದ್ರಿಯಗಳನ್ನೆಲ್ಲ ಹತೋಟಿಯಲ್ಲಿಡದೆ ಮನಸ್ಸು ಪರಿಶುದ್ಧವಾಗದು. ಕರಣೇಂದ್ರಿಯಗಳನ್ನು ಜಾಗೃತಗೊಳಿಸದಂತೆ ಮನಸ್ಸನ್ನು ನಿಯಂತ್ರಿಸಬೇಕು. ಮನಸ್ಸನ್ನು ದೇವರಲ್ಲಿ ಸಿಲುಕಿಸಿದಾಗ ಕರಣವೃತ್ತಿಗಳು ಅಡಗುವವು. ಹಾಗೆ ಮನಸ್ಸನ್ನು ಸಿಲುಕಿಸುವುದರ ಮೂಲಕ ಕರಣಗಳನ್ನೆಲ್ಲ ಲಿಂಗಾರ್ಪಿತ ಮಾಡಿದಾಗ ಮನಸ್ಸು ನಿರಾಳವಾಗುವುದು. ಹೀಗೆ ದೇವರಿಗೆ ಮನವನ್ನು ಅರ್ಪಿಸುವುದಕ್ಕೆ ಕರಣಾರ್ಪಣ ಎನ್ನುತ್ತಾರೆ.

ಮನಸ್ಸನ್ನು ದೇವರಲ್ಲಿ ಸಿಲುಕಿಸಿದ ಬಳಿಕ ಭವವಿಲ್ಲ ಎಂದು ಅಕ್ಕ ಹೇಳುತ್ತಾಳೆ. ಭವವೆಂದರೆ ಪ್ರಾಪಂಚಿಕ ವ್ಯವಹಾರ. ಭವಪಾಶವೆಂದರೆ ಸಂಸಾರ ಬಂಧನ. ಸಂಸಾರ ಬಂಧನಕ್ಕೊಳಗಾದವನೇ ಭವಿ. ಲೌಕಿಕದಲ್ಲೇ ತೊಳಲಾಡುವವನು. ಇಷ್ಟಲಿಂಗ ದೀಕ್ಷೆ ಪಡೆಯದೇ ಇರುವವನಿಗೆ ಭವಿ ಎನ್ನುತ್ತಾರೆ. ಅಂದರೆ ಇಷ್ಟಲಿಂಗ ದೀಕ್ಷೆ ಪಡೆದ ಭಕ್ತನು ಲೌಕಿಕ ವಸ್ತುಗಳಿಗೆ ಆಸೆ ಪಡದೆ ಮತ್ತು ಪರಾವಲಂಬಿಯಾಗದೆ ಬದುಕುವವನು. ಇಹಲೋಕ ಯಾತ್ರೆ ಮುಗಿಯುವವರೆಗೂ ದಾಸೋಹಂ ಭಾವದಿಂದ ಪರೋಪಕಾರಿಯಾಗಿಯೇ ಇರುವವನು. ಇಷ್ಟಲಿಂಗ ಧಾರಣೆ ಮಾಡಿಯೂ ಬದಲಾಗದವರ ತನು ಮಾತ್ರ ಭಕ್ತನದ್ದಾಗಿದ್ದು ಮನ ಭವಿ ಆಗಿರುತ್ತದೆ ಎಂದು ಬಸವಣ್ಣನವರು ಹೇಳಿದ್ದಾರೆ. ಹೀಗೆ ಇಷ್ಟಲಿಂಗ ಧರಿಸಿಯೂ ಸಂಸಾರದ ಜಂಜಾಟದಲ್ಲಿ ಸಿಲುಕಿಕೊಂಡವರು ಭವಭಾರಿಗಳು. ಭವಗೆಡುವುದೆಂದರೆ ಸಂಸಾರ ಬಂಧನದಿಂದ ಮುಕ್ತವಾಗುವುದು. ಸಂಸಾರದ ಜಂಜಾಟದಿಂದ ದೂರಾಗುವುದೆಂದರೆ ಸಂಸಾರ ತ್ಯಾಗ ಮಾಡುವುದೆಂದಲ್ಲ. ಕಾಯಕನಿಷ್ಠೆ, ದೇವಪ್ರೇಮ ಮತ್ತು ನಿಸ್ವಾರ್ಥದಿಂದ ಸರ್ವರಿಗೂ ಒಳ್ಳೆಯದನ್ನೇ ಬಯಸುತ್ತ ಸಂಸಾರವನ್ನು ಅರ್ಥಪೂರ್ಣವಾಗಿಸಿ ಬದುಕುವುದು. ಸಂಸಾರದಲ್ಲಿ ಇದ್ದೂ ದೇವಸನ್ನಿಧಿಯಲ್ಲೇ ಇದ್ದಂತೆ ಬದುಕುವುದು.

share
ರಂಜಾನ್ ದರ್ಗಾ
ರಂಜಾನ್ ದರ್ಗಾ
Next Story
X