ರೋಟೊಮ್ಯಾಕ್ ವಂಚನೆ :ಕಾನ್ಪುರದ ವಿವಿಧ ಸ್ಥಳಗಳಿಗೆ ಸಿಬಿಐ ದಾಳಿ
ಕಾನ್ಪುರ, ಫೆ. 20: ರೋಟೊಮ್ಯಾಕ್ ಮಾಲಿಕ ವಿಕ್ರಮ್ ಕೊಠಾರಿ ಅವರ ಕಾನ್ಪುರ ನಿವಾಸದಲ್ಲಿ ಸೋಮವಾರ ಆರಂಭಿಸಿರುವ ಶೋಧ ಕಾರ್ಯಾಚರಣೆಯನ್ನು ಸಿಬಿಐ ಮಂಗಳವಾರ ಕೂಡ ಮುಂದುವರಿಸಿದೆ.
ಕೊಠಾರಿಯ ದಿಲ್ಲಿ ನಿವಾಸಕ್ಕೆ ಸೋಮವಾರ ದಾಳಿ ನಡೆಸಿದ್ದ ಸಿಬಿಐ ಬೀಗಮುದ್ರೆ ಹಾಕಿತ್ತು. ಬ್ಯಾಂಕ್ ಆಫ್ ಬರೋಡಾ ದಾಖಲಿಸಿದ್ದ ದೂರಿನ ಆಧಾರದಲ್ಲಿ ರೋಟೊಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮೆಟೆಡ್, ಅದರ ನಿರ್ದೇಶಕರಾದ ವಿಕ್ರಮ್ ಕೊಠಾರಿ, ಸಾಧನಾ ಕೊಠಾರಿ, ರಾಹುಲ್ ಕೊಠಾರಿ ಹಾಗೂ ಅನಾಮಿಕ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸಿಬಿಐ ಸೋಮವಾರ ಪ್ರಕರಣ ದಾಖಲಿಸಿತ್ತು.
ಅಕ್ರಮ ವರ್ಗಾವಣೆ ಮೂಲಕ 2919 ಕೋ. ರೂ.ವನ್ನು ವಿವಿಧ ಬ್ಯಾಂಕ್ಗಳಿಗೆ ವಂಚಿಸಲಾಗಿದೆ ಎಂದು ರೋಟೊಮ್ಯಾಕ್ ವಿರುದ್ಧ ನೀಡಲಾದ ದೂರಿನಲ್ಲಿ ಆರೋಪಿಸಲಾಗಿದೆ. ಈ ಸಾಲ ಬಡ್ಡಿ ಬಾಧ್ಯತೆಗಳನ್ನು ಒಳಗೊಂಡಿಲ್ಲ ಎಂದು ಸಿಬಿಐ ಹೇಳಿದೆ.
ಬಡ್ಡಿ ಬಾಧ್ಯತೆಗಳೊಂದಿಗೆ ರೋಟೊಮ್ಯಾಕ್ ಪಾವತಿಸಬೇಕಾದ ಒಟ್ಟು ಬಾಕಿ ಮೊತ್ತ 3695 ಕೋ. ರೂ. ಪಾವತಿ ಪಡೆಯಬೇಕಾದ ಬ್ಯಾಂಕ್ಗಳು ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್ ಹಾಗೂ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್.
ಸಿಬಿಐ ಕೊಠಾರಿ, ಅವರ ಪತ್ನಿ ಹಾಗೂ ಪುತ್ರನನ್ನು ವಿಚಾರಣೆಗೆ ಒಳಪಡಿಸಿದೆ.