ಅಗ್ನಿ 2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ
ಭುವನೇಶ್ವರ, ಫೆ. 20: ಭಾರತ ದೇಶೀಯವಾಗಿ ಅಭಿವೃದ್ಧಿಗೊಳಿಸಿದ ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-2ನ್ನು ಒರಿಸ್ಸಾ ಕಡಲ ತೀರದ ಅಬ್ದುಲ್ ಕಲಾಂ ದ್ವೀಪದಿಂದ ಮಂಗಳವಾರ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು.
ಬಾಲಸೂರು ಜಿಲ್ಲೆಯ ಸಮಗ್ರ ಪರೀಕ್ಷಾ ವಲಯದ ಉಡಾವಣಾ ಸಂಕೀರ್ಣ-4ರಲ್ಲಿ ಬೆಳಗ್ಗೆ 8.38ಕ್ಕೆ ನೆಲದಿಂದ ನೆಲಕ್ಕೆ ನೆಗೆಯುವ ಕ್ಷಿಪಣಿಯನ್ನು ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಬಳಕೆದಾರರ ತರಬೇತಿ ಅಭ್ಯಾಸದ ಒಂದು ಭಾಗವಾಗಿ ಭಾರತೀಯ ಸೇನೆಯ ವ್ಯೂಹಾತ್ಮಕ ಪಡೆಗಳ ಕಮಾಂಡೊ ಈ ಪರೀಕ್ಷಾರ್ಥ ಪ್ರಯೋಗ ಆಯೋಜಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಅಗ್ನಿ 2ನ್ನು ಈಗಾಗಲೆ ಭಾರತೀಯ ಸೇನೆಗೆ ನಿಯೋಜಿಸಲಾಗಿದೆ.
ಈ ಕ್ಷಿಪಣಿಯ ದಾಳಿ ವ್ಯಾಪ್ತಿ 2,000 ಕಿ. ಮೀ. ಇದು 17 ಟನ್ ಭಾರ ಹೊಂದಿದೆ ಹಾಗೂ ಇದಕ್ಕೆ 1,000 ಕಿ.ಗ್ರಾಂ. ಪ್ಲೇಲೋಡ್ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಇದೆ.
Next Story