ರೈಲ್ವೇ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹೊಸದಿಲ್ಲಿ, ಫೆ.20: 10, 12ನೇ ತರಗತಿ ಉತ್ತೀರ್ಣ, ಐಟಿಐ, ಡಿಪ್ಲೊಮ, ಇಂಜಿನಿಯರ್ ಹಾಗೂ ಪದವೀಧರರಿಗೆ ಭಾರತೀಯ ರೈಲ್ವೇ ಇಲಾಖೆಯಲ್ಲಿ ದುಡಿಯುವ ಅವಕಾಶ. ರೈಲ್ವೇ ನೇಮಕಾತಿ ಮಂಡಳಿಯು (ಆರ್ಆರ್ಬಿ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಗ್ರೂಪ್ ಎ,ಬಿ,ಸಿ ಮತ್ತು ಡಿಯಲ್ಲಿ ವಿವಿಧ ತಾಂತ್ರಿಕ, ತಾಂತ್ರಿಕೇತರ ಮತ್ತು ಅರೆವೈದ್ಯಕೀಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಆಸಕ್ತರು ಆನ್ಲೈನ್ ಅಥವಾ ಪತ್ರದ ಮೂಲಕ ಅರ್ಜಿಗಳನ್ನು ಹಾಕಬಹುದಾಗಿದೆ.
ರೈಲ್ವೇ ನೇಮಕಾತಿ ನಿಯಂತ್ರಣ ಮಂಡಳಿಯು ಸಂಪೂರ್ಣವಾಗಿ ಭಾರತ ಸರಕಾರ ರೈಲ್ವೇ ಸಚಿವಾಲಯದಿಂದ ನಿರ್ವಹಿಸಲ್ಪಡುವ ಸಂಸ್ಥೆಯಾಗಿದೆ.
Next Story