ಪೂಂಚ್ ಸೆಕ್ಟರ್ನಲ್ಲಿ ನಿಯಂತ್ರಣ ರೇಖೆ ಸಮೀಪ ಹಾರಿದ ಪಾಕ್ ಹೆಲಿಕಾಪ್ಟರ್ !
ಶ್ರೀನಗರ, ಫೆ.21: ಪಾಕಿಸ್ತಾನಕ್ಕೆ ಹೆಲಿಕಾಪ್ಟರ್ವೊಂದು ಪೂಂಚ್ ಸೆಕ್ಟರ್ ಬಳಿ ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ನಿಯಂತ್ರಣ ರೇಖೆಯ ಕೇವಲ 300 ಮೀ. ದೂರದವರೆಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಯಾವುದೇ ರೀತಿಯ ಗುಂಡಿನ ಚಕಮಕಿ ಅಥವಾ ಉದ್ವಿಗ್ನತೆ ಉಂಟಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಉಭಯ ದೇಶಗಳ ಮಧ್ಯೆ ಒಪ್ಪಿಕೊಳ್ಳಲಾಗಿರುವ ನಿಯಮದ ಪ್ರಕಾರ, ಹೆಲಿಕಾಪ್ಟರ್ಗಳಿಗೆ ನಿಯಂತ್ರಣ ರೇಖೆಯ ಒಂದು ಕಿ.ಮೀ ವ್ಯಾಪ್ತಿಯ ಒಳಗೆ ಪ್ರವೇಶ ನಿಷೇಧಿಸಲಾಗಿದ್ದರೆ ವಿಮಾನಗಳು ಎಲ್ಒಸಿಯ ಹತ್ತು ಕಿ.ಮೀ ವ್ಯಾಪ್ತಿಯ ಒಳಗೆ ಪ್ರವೇಶಿಸುವಂತಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
Next Story