ಹೊಸ ಪಕ್ಷ ಘೋಷಿಸಿದ ಕಮಲ್ ಹಾಸನ್
'ಉಳಗನಾಯಗನ್' ಪಕ್ಷದ ಹೆಸರೇನು?

ಮಧುರೈ, ಫೆ,21: ರಾಜಕೀಯಕ್ಕೆ ಕಾಲಿಟ್ಟಿರುವ ನಟ, ನಿರ್ದೇಶಕ ಕಮಲ್ ಹಾಸನ್ ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಿಸಿದ್ದಾರೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಿದ್ದ, ಮಧುರೈ ಓಥಕಡೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ತನ್ನ ಪಕ್ಷದ ಹೆಸರು ‘ಮಕ್ಕಳ್ ನೀದಿ ಮಯ್ಯಮ್’ ಎಂದು ಘೋಷಿಸಿದರು.
ಪಕ್ಷದ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಇಂದು ಬೆಳಗ್ಗೆ ಕಮಲ್ ರಾಮೇಶ್ವರಂನಿಂದ ತಮ್ಮ ರಾಜಕೀಯ ಯಾತ್ರೆಯನ್ನು ಆರಂಭಿಸಿದ್ದರು. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ನಿವಾಸಕ್ಕೆ ಕಮಲ್ ಭೇಟಿ ನೀಡಿದರು.
Next Story





