ಕಾಟಿಪಳ್ಳ: ಶಾಲಾ ಕೊಠಡಿಗೆ ಶಾಸಕ ಮೊಯ್ದಿನ್ ಬಾವರಿಂದ ಗುದ್ದಲಿ ಪೂಜೆ

ಮಂಗಳೂರು, ಫೆ. 21: ದ.ಕ.ಜಿ.ಹಿ.ಪ್ರಾ.ಶಾಲೆ 2ನೇ ವಿಭಾಗ ಕಾಟಿಪಳ್ಳಕ್ಕೆ 2017-18ನೇ ಸಾಲಿನ ಕೆ.ಎಲ್.ಎ.ಡಿ.ಎಸ್ ಯೋಜನೆಯ ಒಂದು ಹೊಸ ಕೊಠಡಿಗೆ ಅನುದಾನದಲ್ಲಿ ಉತ್ತರ ವಿಧಾನ ಸಭಾ ಶಾಸಕ ಮೊಯ್ದಿನ್ ಬಾವ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಈ ಶಾಲೆಯ ವಾರ್ಷಿಕೋತ್ಸವ ಸಂದರ್ಭ ಶಾಲಾ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘ ಶಾಲೆಗೆ ಸುಮಾರು 30 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲು ಮನವಿ ನೀಡಿದರು. ಇದನ್ನು ಚುನಾವಣೆಯ ನಂತರ ನೆರವೇರಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ಪಿ ಬಶೀರ್ ಅಹ್ಮದ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಬೀರ್ ಕಾಟಿಪಳ್ಳ, ಶಾಲಾ ಮುಖ್ಯೋಪಾದ್ಯಾಯಿನಿ ಪಿ ಸತ್ಯಭಾಮ ಹಾಗು ಸುರತ್ಕಲ್ ಬ್ಲಾಕ್ ಸಮಿತಿಯ ಅಧ್ಯಕ್ಷ ಕೇಶವ ಸನಿಲ್, ಬ್ಲಾಕ್ ಸಮಿತಿಯ ಮಹಿಳಾ ಅಧ್ಯಕ್ಷೆ ಶಕುಂತಲ ಕಾಮತ್ ಎಸ್ ಡಿ ಎಂ ಸಿ ಅಧ್ಯಕ್ಷೆ ಫಾತಿಮಾ, ಕಾಂಗ್ರಸ್ ಮುಖಂಡರುಗಳಾದ ಹುಸೈನ್ ಕಾಟಿಪಳ್ಳ, ಹಬೀಬ್ ಕಾಟಿಪಳ್ಳ, ಮಂಗಳೂರು ಬಾವ ಮುಂತಾದವರು ಪಾಲ್ಗೊಂಡಿದ್ದರು.
Next Story





