ನಸ್ರತುಲ್ ಮುಸಾಕೀನ್ ಅಸೊಸಿಯೇಷನ್: ಪದಾಧಿಕಾರಿಗಳ ಆಯ್ಕೆ

ಅಸ್ಲಮ್
ಕುಂದಾಪುರ, ಫೆ.21: ಕುಂದಾಪುರದ ಕೋಡಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ನಸ್ರತುಲ್ ಮುಸಾಕೀನ್ ಅಸೊಸಿಯೇಷನ್ ಸೌದಿ ಅರೇಬಿಯಾ ರಿಯಾದ್ ಘಟಕದ ಅಧ್ಯಕ್ಷರಾಗಿ ಕುಂದಾಪುರದ ಅಸ್ಲಮ್ ಕೋಯಾ ಪುನರಾಯ್ಕೆಗೊಂಡಿದ್ದಾರೆ.
ರಿಯಾದ್ನ ಮಲಾಝ್ನಲ್ಲಿ ಜರಗಿದ ಸಂಸ್ಥೆಯ ವಾರ್ಷಿಕ ಮಹಾಸಭೆ ಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷ ರಾಗಿ ಎಂ.ಅಬ್ದುಲ್ಲಾ, ಉಪಾಧ್ಯಕ್ಷರಾಗಿ ಮುಲ್ಲಾ ಮೊಹಿದ್ದೀನ್ ಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಅನ್ವರ್ ಅಲಿ ಹುಸೇನ್, ಜತೆ ಕಾರ್ಯದರ್ಶಿ ಯಾಗಿ ಅಬು ಮಹಮ್ಮದ್ ಕೆ., ಖಜಾಂಚಿಯಾಗಿ ಕೋಡಿ ಸುಲೈಮಾನ್, ಉಪಖಜಾಂಚಿಯಾಗಿ ಶಂಸುದ್ದೀನ್ ಸಂಗರ, ಮುಖ್ಯ ಸಲಹೆಗಾರರಾಗಿ ಅಬ್ದುಲ್ ಖಾದರ್ ಕುದ್ರೋಳಿ, ಇದ್ರೀಸ್ ಖುರೈಶಿ, ಬೆದ್ರೆ ಇಬ್ರಾಹಿಮ್, ಲೆಕ್ಕ ಪರಿಶೋಧಕರಾಗಿ ಉಬೈದ್ ಖರೈಶಿ ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
Next Story





