ಉಡುಪಿ ನಗರಸಭೆ ಸದಸ್ಯನಿಗೆ ಹಲ್ಲೆ: ದೂರು
ಉಡುಪಿ, ಫೆ.21: ಉಡುಪಿ ನಗರಸಭೆ ಸದಸ್ಯ ರಮೇಶ್ ಪೂಜಾರಿ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಮೇಶ್ ಪೂಜಾರಿ ಫೆ.18ರಂದು ಬೆಳಗ್ಗೆ ತನ್ನ ಗುಂಡಿಬೈಲು ವಾರ್ಡ್‌ನ ರಸ್ತೆ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸುತ್ತಿರುವಾಗ ಗಣೇಶ ಆಚಾರ್ಯ, ಪ್ರಾಣೇಶ್, ಪ್ರಭಾಕರ ಪೂಜಾರಿ ಎಂಬವರು ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು ಹಲ್ಲೆ ನಡೆಸಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ತುಂಡರಿಸಿ ಎಳೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





