ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜ್ ವತಿಯಿಂದ ರಸಪ್ರಶ್ನೆ ಸ್ಪರ್ಧೆ
ಮಂಗಳೂರು, ಫೆ.21: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜ್‌ನ ಶಸ್ತ್ರಚಿಕಿತ್ಸಾ ವಿಭಾಗವು ಫೆ. 24, 2018ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎ.ವಿ. ಸಭಾಂಗಣದಲ್ಲಿ ಡಾ. ವೆಂಕಟ್ ರಾವ್ ಸ್ಮರಣಾರ್ಥ ಸ್ನಾತಕೋತ್ತರ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ.
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜ್‌ನ ಶಸ್ತ್ರಚಿಕಿತ್ಸಾ ವಿಭಾಗವು ಮುಂದುವರಿಕಾ ಶಸ್ತ್ರಚಿಕಿತ್ಸಾ ಶಿಕ್ಷಣ 2018 (ಸಿಎಸ್‌ಇ 2018) ಹಾಗೂ ಸ್ನಾತಕೋತ್ತರ ಪದವಿಯ ಬೆಳ್ಳಿ ಹಬ್ಬ ಆಚರಣೆಯನ್ನು ಫೆಬ್ರವರಿ 25ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಎಫ್‌ಎಂಸಿಸಿಯ ಜ್ಞಾನ ಕೇಂದ್ರದ ದಶಮಾನ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದೆ.
Next Story





