ವಿಜಯ್ ಹಝಾರೆ ಟ್ರೋಫಿ: ಕರ್ನಾಟಕ, ಮಹಾರಾಷ್ಟ್ರ ಸೆಮಿಫೈನಲ್ಗೆ
► ಮಯಾಂಕ್ 140 ►ಸಮರ್ಥ 125

ಮಯಾಂಕ್
ಹೊಸದಿಲ್ಲಿ, ಫೆ.21: ಮಾಯಾಂಕ್ ಅಗರವಾಲ್ ಮತ್ತು ರವಿ ಕುಮಾರ್ ಸಮರ್ಥ ಅವರ ಆಕರ್ಷಕ ಶತಕಗಳ ನೆರವಿನಲ್ಲಿ ಕರ್ನಾಟಕ ತಂಡ ಇಲ್ಲಿ ನಡೆದ ವಿಜಯ್ ಹಝಾರೆ ಟ್ರೋಫಿ ಕ್ವಾರ್ಟರ್ ಫೈನಲ್ನಲ್ಲಿ ಹೈದರಾಬಾದ್ ತಂಡ ವಿರುದ್ಧ 103 ರನ್ಗಳ ಭರ್ಜರಿ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ.
ದಿಲ್ಲಿಯ ಪಾಲಮ್ ಸ್ಟೇಡಿಯಮ್ನಲ್ಲಿ ನಡೆದ ಇನ್ನೊಂದು ಕ್ವಾರ್ಟರ್ ಫೈನಲ್ನಲ್ಲಿ ಮುಂಬೈ ವಿರುದ್ಧ 7 ವಿಕೆಟ್ಗಳ ಅಂತರದಲ್ಲಿ ಜಯ ಗಳಿಸಿರುವ ಮಹಾರಾಷ್ಟ್ರ ತಂಡ ಸೆಮಿಫೈನಲ್ ತಲುಪಿದೆ.
ದಿಲ್ಲಿ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಗೆಲುವಿಗೆ 348 ರನ್ಗಳ ಸವಾಲನ್ನು ಪಡೆದ ಹೈದರಾಬಾದ್ ತಂಡ ಶ್ರೇಯಸ್ ಗೋಪಾಲ್ (31ಕ್ಕೆ 5) ದಾಳಿಗೆ ಸಿಲುಕಿ 42.5 ಓವರ್ಗಳಲ್ಲಿ 244 ರನ್ಗಳಿಗೆ ಆಲೌಟಾಗಿದೆ. ಹೈದರಾಬಾದ್ ತಂಡದ ಪರ ಅಂಬಟಿ ರಾಯುಡು (64) ಮತ್ತು ತೆಲುಕುಪಲ್ಲಿ ರವಿ ತೇಜಾ (53) ಅರ್ಧಶತಕಗಳ ಕೊಡುಗೆ ನೀಡಿದರು. ಇವರನ್ನು ಹೊರತುಪಡಿಸಿ ತಂಡದ ಸಹ ಆಟಗಾರರು ದೊಡ್ಡ ಕೊಡುಗೆ ನೀಡುವಲ್ಲಿ ಎಡವಿದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಕರ್ನಾಟಕ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 347 ರನ್ ಗಳಿಸಿತ್ತು. ಮಾಯಾಂಕ್ ಅಗರವಾಲ್ ಮತ್ತು ಸಮರ್ಥ್ ಅವರು ಎರಡನೇ ವಿಕೆಟ್ಗೆ 242 ರನ್ಗಳ ಜೊತೆಯಾಟ ನೀಡುವ ಮೂಲಕ ತಂಡದ ಸ್ಕೋರ್ನ್ನು ಏರಿಸಿದರು. ಇವರ ಶತಕಗಳ ನೆರವಿನಲ್ಲಿ ಕರ್ನಾಟಕ ತಂಡ ಹೈದರಾಬಾದ್ಗೆ ಕಠಿಣ ಸವಾಲು ವಿಧಿಸಿತ್ತು.
ಕರ್ನಾಟಕ ತಂಡದ ಮಾಯಾಂಕ್ ಅಗರವಾಲ್ ಅವರು 140 ರನ್(111ಎ, 12ಬೌ,7ಸಿ) ಮತ್ತು ಸಮರ್ಥ 125 ರನ್(124ಎ, 13ಬೌ) ಗಳಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
►ಕರ್ನಾಟಕ 50 ಓವರ್ಗಳಲ್ಲ್ಲಿ 347/8 (ಅಗರವಾಲ್ 140, ಸಮರ್ಥ 125; ಸಿರಾಜ್ 59ಕ್ಕೆ 5)
►ಹೈದರಾಬಾದ್ 42.5 ಓವರ್ಗಳಲ್ಲಿ ಆಲೌಟ್ 244 (ರಾಯುಡು 64, ರವಿ ತೇಜಾ 53; ಶ್ರೇಯಸ್ ಗೋಪಾಲ್ 31ಕ್ಕೆ 5).
ಮಹಾರಾಷ್ಟ್ರಕ್ಕೆ ಜಯ
ವಿಜಯ್ ಹಝಾರೆ ಟ್ರೋಫಿಯ 2ನೇ ಕ್ವಾರ್ಟರ್ ಫೈನಲ್ನಲ್ಲಿ ಮುಂಬೈ ವಿರುದ್ಧ ಮಹಾರಾಷ್ಟ್ರ ತಂಡ 7 ವಿಕೆಟ್ಗಳ ಜಯ ಗಳಿಸಿ ಸೆಮಿಫೈನಲ್ನಲ್ಲಿ ಅವಕಾಶ ದೃಢಪಡಿಸಿದೆ.
ಗೆಲುವಿಗೆ 223 ರನ್ಗಳ ಸವಾಲನ್ನು ಪಡೆದಿದ್ದ ಮಹಾರಾಷ್ಟ್ರ ತಂಡ 46.5 ಓವರ್ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 224 ರನ್ ಗಳಿಸಿತು. ಶ್ರೀಕಾಂತ್ ಮುಂಢೆೆ 70 ಮತ್ತು ನೌಶಾದ್ ಶೇಖ್ 51 ರನ್ ಗಳಿಸಿ ಮಹಾರಾಷ್ಟ್ರವನ್ನು ಗೆಲುವಿನ ದಡ ತಲುಪಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಮುಂಬೈ ತಂಡ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 222 ರನ್ ಗಳಿಸಿತ್ತು. ಸೂರ್ಯಕುಮಾರ್ ಯಾದವ್ (69) ಮುಂಬೈ ತಂಡದ ಪರ ಗರಿಷ್ಠ ವೈಯಕ್ತಿಕ ಕೊಡುಗೆ ನೀಡಿದರು.
ಸಂಕ್ಷಿಪ್ತ ಸ್ಕೋರ್ ವಿವರ
►ಮುಂಬೈ 50 ಓವರ್ಗಳಲ್ಲಿ 222/9( ಯಾದವ್ 69; ಪ್ರದೀಪ್ ದಾಧೆ 57ಕ್ಕೆ 3)
►ಮಹಾರಾಷ್ಟ್ರ 46.5 ಓವರ್ಗಳಲ್ಲಿ 224/3( ಶ್ರೀಕಾಂತ್ ಮುಂಢೆ 70, ನೌಶಾದ್ ಶೇಖ್ 51; ಶಿವಮ್ ಮಲ್ಹೋತ್ರಾ 29ಕ್ಕೆ 1)







