ನನ್ನ ತಾಯಿ ಊಟದಲ್ಲಿ ಮಾದಕ ವಸ್ತು ಬೆರೆಸುತ್ತಿದ್ದರು: ಸುಪ್ರೀಂ ಕೋರ್ಟ್ ಗೆ ತಿಳಿಸಿದ ಹಾದಿಯಾ

ಹೊಸದಿಲ್ಲಿ, ಫೆ.22: ಹನ್ನೊಂದು ತಿಂಗಳ ಕಾಲ ಪೋಷಕರ ಜೊತೆಗಿದ್ದಾಗ ತನ್ನ ತಾಯಿ ಊಟದಲ್ಲಿ ಮಾದಕ ವಸ್ತು ಬೆರೆಸುತ್ತಿದ್ದರು ಎಂದು ಹಾದಿಯಾ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.
ಈ ಬಗ್ಗೆ ಅಫಿದಾವಿತ್ ನಲ್ಲಿ ವಿವರಿಸಿರುವ ಹಾದಿಯಾ, ಆಹಾರದಲ್ಲಿ ಮಾದಕ ವಸ್ತು ಬೆರೆಸುತ್ತಿದ್ದ ಬಗ್ಗೆ ತಾನು ಪೊಲೀಸರಿಗೆ ಪದೇ ಪದೇ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದವರು ಹೇಳಿದ್ದಾರೆ.
“ತಾಯಿಯೇ ನನಗಾಗಿ ಆಹಾರ ತಯಾರಿಸುತ್ತಿದ್ದರು. ಒಂದು ದಿನ ಬೆಳಗ್ಗಿನ ಉಪಹಾರದ ಸಂದರ್ಭ ಅಡುಗೆ ಮನೆಗೆ ತೆರಳಿದ ತಾಯಿ ಆಹಾರ ತಯಾರಿಸುತ್ತಿದ್ದರು. ನಾನು ಕೋಣೆಯಿಂದ ಹೊರಬಂದು ತಿಂಡಿ ಪಡೆದುಕೊಳ್ಳಲು ಅಡುಗೆ ಕೋಣೆಗೆ ಹೋದೆ. ನಾನು ಅಲ್ಲಿಗೆ ತೆರಳಿದ್ದು ತಾಯಿಗೆ ಗೊತ್ತಾಗಲಿಲ್ಲ. ಆಹಾರದೊಂದಿಗೆ ಆಕೆ ಏನೋ ಬೆರೆಸುತ್ತಿದ್ದುದನ್ನು ನಾನು ನೋಡಿದೆ” ಎಂದು ಅಫಿದಾವಿತ್ ನಲ್ಲಿ ತಿಳಿಸಲಾಗಿದೆ.
“ಈ ಬಗ್ಗೆ ನಾನು ಪೊಲೀಸರಿಗೆ ತಿಳಿಸಿದ್ದರೂ ಅವರು ಕಿವಿಗೊಡಲಿಲ್ಲ. ಆ ದಿನದಿಂದಲೇ ನಾನೇ ಆಹಾರ ತಯಾರಿಸಲು ಆರಂಭಿಸಿದೆ” ಎಂದವರು ಹೇಳಿದ್ದಾರೆ.
Next Story





