ಭಟ್ಕಳ: ಫೆ. 24 ರವರೆಗೆ ಶಾಂತಿ ಸಾಹಿತ್ಯ ವಾಹಿನಿಯಿಂದ ಪುಸ್ತಕ ಮಾರಾಟ

ಭಟ್ಕಳ, ಫೆ. 22: ಮಂಗಳೂರು ಶಾಂತಿ ಪ್ರಕಾಶನ ಸಂಸ್ಥೆಯು ಶಾಂತಿ, ಸೌಹಾರ್ದತೆ ಸಾರುವ ಸಾಹಿತ್ಯ ಕೃತಿಗಳನ್ನು ಜನರಿಗೆ ಪರಿಚಯಿಸಿ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಧರ್ಮಸ್ಥಳ ಸಂಸ್ಥಾನಮ್ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸ್ವಾಮಿಜಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅವರು ಬುಧವಾರ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಜರಗಿದ 'ಹಲವು ಧರ್ಮಗಳು ಒಂದು ಭಾರತ' ಸಮಾವೇಶದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ನಂತರ ಮಂಗಳೂರು ಶಾಂತಿ ಪ್ರಕಾಶನ ಸಂಸ್ಥೆಯ ಸಂಚಾರಿ, ಸಾಹಿತ್ಯ ವಾಹಿನಿ ಯನ್ನು ಸಂದರ್ಶಿಸಿ ಪ್ರಶಂಸೆಯನ್ನು ವ್ಯಕ್ತಪಡಿಸದರು.
ಸಾಹಿತ್ಯ ವಾಹಿನಿಯು ಫೆ.24 ರ ವರೆಗೆ ಭಟ್ಕಳ ನಗರದಲ್ಲಿ ಸಂಚರಿಸಲಿದ್ದು ರಂಗೀಕಟ್ಟೆ, ಹಳೆ ಬಸ್ ನಿಲ್ದಾಣ, ನೂರ್ ಮಸೀದಿ ಬಸ್ ನಿಲ್ದಾಣ ಬಳಿ ಮುಂತಾದ ಕಡೆಗಳಲ್ಲಿ ಲಭ್ಯವಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಚಾರಿ ಸಾಹಿತ್ಯ ವಾಹಿನಿ ವ್ಯವಸ್ಥಾಪ ಚಾಂದ್ ಪಾಶ ಮನವಿ ಮಾಡಿಕೊಂಡಿದ್ದಾರೆ.
Next Story





