ವಿದೇಶದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ‘ನೀಟ್’ ನಿಯಮ ಹಾಲಿ ವಿದ್ಯಾರ್ಥಿಗಳಿಗೆ ಅನ್ವಯಿಸದು: ಸರಕಾರ

ಹೊಸದಿಲ್ಲಿ, ಫೆ.22: ವಿದೇಶದಲ್ಲಿ ವೈದ್ಯಕೀಯ ಅಧ್ಯಯನ ನಡೆಸಲು ಇಚ್ಛಿಸುವ ವಿದ್ಯಾರ್ಥಿಗಳು ‘ನೀಟ್’ ಪರೀಕ್ಷೆ ತೇರ್ಗಡೆಯಾಗಬೇಕೆಂಬ ನಿಯಮ ಈಗಾಗಲೇ ವಿದೇಶದಲ್ಲಿ ಎಂಬಿಬಿಎಸ್ ಅಧ್ಯಯನಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಅನ್ವಯಿಸದು ಎಂದು ಕೇಂದ್ರದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಈ ನಿಯಮದಿಂದ ತಮಗೆ ವಿನಾಯಿತಿ ನೀಡಬೇಕೆಂದು ಈಗಾಗಲೇ ವಿದೇಶದಲ್ಲಿ ಎಂಬಿಬಿಎಸ್ ಅಧ್ಯಯನಕ್ಕೆ ಪ್ರವೇಶ ದೊರಕಿಸಿಕೊಂಡಿರುವ ವಿದ್ಯಾರ್ಥಿಗಳು ಸರಕಾರವನ್ನು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ, ಮೇ 2018ರ ಬಳಿಕ ವಿದೇಶದಲ್ಲಿ ಎಂಬಿಬಿಎಸ್ ಅಧ್ಯಯನ ನಡೆಸ ಬಯಸುವ ವಿದ್ಯಾರ್ಥಿಗಳು ‘ನೀಟ್’ ತೇರ್ಗಡೆಯಾಗಬೇಕು ಎಂದು ಇಲಾಖೆ ಸ್ಪಷ್ಟಪಡಿಸಿದೆ.
Next Story





