ಬ್ರಿಟನ್ನಲ್ಲಿ ಆಶ್ರಯ ಕೋರಿ 5,500 ಭಾರತೀಯರ ಅರ್ಜಿ
ಲಂಡನ್, ಫೆ. 22: ಕಳೆದ 5 ವರ್ಷಗಳ ಅವಧಿಯಲ್ಲಿ 5,500 ಭಾರತೀಯ ನಾಗರಿಕರು ಬ್ರಿಟನ್ನಲ್ಲಿ ಆಶ್ರಯ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ರಾಷ್ಟ್ರೀಯ ಅಂಕಿಸಂಖ್ಯೆಗಳ ಕಚೇರಿ (ಒಎನ್ಎಸ್) ಗುರುವಾರ ಬಿಡುಗಡೆಗೊಳಿಸಿದ ನೂತನ ಅಂಕಿಸಂಖ್ಯೆಗಳು ತಿಳಿಸಿವೆ.
ಹೆಚ್ಚಿನವರು ಬ್ರಿಟನ್ಗೆ ಆಗಮಿಸಿದ ಬಳಿಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅಂದರೆ ಅವರು ಸೂಕ್ತ ವೀಸಾಗಳೊಂದಿಗೆ ಬ್ರಿಟನ್ಗೆ ಪ್ರಯಾಣಿಸಿದ್ದಾರೆ. 5 ಶೇಕಡಕ್ಕೂ ಕಡಿಮೆ ಮಂದಿ ಬ್ರಿಟನ್ನ ಬಂದರುಗಳಿಗೆ ಆಗಮಿಸಿದ ಬಳಿಕ ಅರ್ಜಿ ಸಲ್ಲಿಸಿದ್ದಾರೆ.
Next Story