ಮಡಿಕೇರಿ : ಪಿಎಫ್‍ಐ ಸಂಘಟನೆಯಿಂದ ವೀಲ್ ಚೆಯರ್ ಕೊಡುಗೆ

ಮಡಿಕೇರಿ,ಫೆ.22: ಶನಿವಾರಸಂತೆ ಸಮೀಪದ ಗೋಪಾಲಪುರ ನಿವಾಸಿ ಶವಪ್ರಕಾಶ್ (ಮಂಜು) ಎಂಬವರು ಮರದಿಂದ ಬಿದ್ದು ಗಂಭೀರ ಗಾಯಗೊಂಡ ಹಿನ್ನಲೆ ಕಳೆದ ಕೆಲವು ವರ್ಷಗಳಿಂದ ಹಾಸಿಗೆಯನ್ನು ಹಿಡಿದಿದ್ದರು. ಇವರಿಗೆ ಶನಿವಾರಸಂತೆ ಹಾಗೂ ಕುಶಾಲನಗರದ ಪಿಎಫ್‍ಐ ಕಾರ್ಯಕರ್ತರು ಜೊತೆ ಸೇರಿ ಗುರುವಾರ ಶಿವಪ್ರಕಾಶ್ ಮನೆಗೆ ಭೇಟಿ ನೀಡಿ ವೀಲ್ ಚೆಯರನ್ನು ಹಸ್ತಾಂತರಿಸಿದರು.
ಈ ಸಂದರ್ಭ ಶನಿವಾರಸಂತೆಯ ಪಿಎಫ್‍ಐ ಅಧ್ಯಕ್ಷ ಮುನೀರ್, ಕಾರ್ಯದರ್ಶಿ ಭಾಷಾ, ಎಸ್‍ಡಿಪಿಐ ಪಕ್ಷದ ಆಬಿದ್, ಇಮ್ರಾನ್, ಮುಜಾಹಿದ್, ಶರೀಫ್, ಅಜೀಜ್, ಅಕ್ಮಲ್ ಪಾಷಾ ಇದ್ದರು.
Next Story





