9842 ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಮುಂಭಡ್ತಿ: ತನ್ವೀರ್ ಸೇಠ್

ಬೆಂಗಳೂರು, ಫೆ.23: ಪ್ರೌಢಶಾಲಾ ಸಹ ಶಿಕ್ಷಕರು ಸ್ನಾತಕೋತ್ತರ ಪದವಿಯಲ್ಲಿ ಶೇ.55ರಷ್ಟು ಅಂಕಗಳನ್ನು ಹೊಂದಿದಲ್ಲಿ ಅಂಥವರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಹುದ್ದೆಗೆ ಭಡ್ತಿ ಹೊಂದಲು ಅವಕಾಶವಿದ್ದು, ಸ್ನಾತಕೋತ್ತರ ಪದವಿ ಹೊಂದಿದ ಒಟ್ಟು 9842 ಪ್ರೌಢ ಶಾಲಾ ಸಹ ಶಿಕ್ಷಕರು ಮುಂಭಡ್ತಿ ಪಡೆಯಲು ನೋಂದಣಿಯಾಗಿರುತ್ತಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.
ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ರಾಮಚಂದ್ರಗೌಡ ಕೇಳಿದ ಪಶ್ನೆಗೆ ಉತ್ತರಿಸಿದ ಸಚಿವರು, ಸ್ನಾತಕೋತ್ತರ ಪದವಿಯಲ್ಲಿ ಶೇ.55ರಷ್ಟು ಅಂಕಗಳನ್ನು ಹೊಂದಿದ ಪ್ರೌಢ ಶಾಲಾ ಸಹ ಶಿಕ್ಷಕರಿಗೆ 2012ರ ಬಳಿಕ ಮುಂಭಡ್ತಿ ನೀಡಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಮುಂಭಡ್ತಿ ನೀಡಲು ಆದೇಶಿಸಿದ್ದೇನೆ ಎಂದು ಹೇಳಿದರು.
Next Story





