‘ಅಭಿಪ್ರಾಯಭೇದದ ಮೇಲೆ ಹಿಂದುತ್ವದ ದಾಳಿ’: ಫೆ.24 ರಂದು ವಿಚಾರ ಸಂಕಿರಣ
ಬೆಂಗಳೂರು, ಫೆ. 23: ಅಭಿಪ್ರಾಯಭೇದದ ಮೇಲಿನ ಹಿಂದುತ್ವವಾದಿಗಳ ದಾಳಿಯನ್ನು ಖಂಡಿಸಿ ಫೆ.24 ರಂದು ಸಂಜೆ 4 ಗಂಟೆಗೆ ಇಲ್ಲಿನ ಸೆಂಟ್ರಲ್ ಕಾಲೇಜು ಆವರಣದ ಸೆನೆಟ್ ಹಾಲ್‌ನಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳ ಸಮನ್ವಯ ಸಮಿತಿ (ಸಿಡಿಆರ್‌ಓ) ವಿಚಾರ ಸಂಕಿರಣವನ್ನು ಏರ್ಪಡಿಸಿದೆ.
ಆಂಧ್ರಪ್ರದೇಶದ ವೆಂಕಟೇಶ್ವರ ವಿವಿ ಉಪನ್ಯಾಸಕ ಪ್ರೊ.ಶೇಷಯ್ಯ, ವಕೀಲರಾದ ಕ್ರಾಂತಿ ಚೈತನ್ಯ, ಬಿ.ಟಿ.ವೆಂಕಟೇಶ್, ಕಾಶೀನಾಥ್ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯಲ್ಲಿ ಪಿಡಿಎಫ್‌ನ ಸಿ.ಶ್ರೀರಾಮ್ ವಹಿಸಲಿದ್ದಾರೆ. ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ಹಿಂದುತ್ವದ ದಾಳಿ ನಿಲ್ಲಬೇಕು.
ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಸೂಕ್ತ ರಕ್ಷಣೆ ಕಲ್ಪಿಸಿ, ಅಭಿಪ್ರಾಯಬೇಧದ ಮೇಲಿನ ಹಿಂದುತ್ವವಾದಿಗಳ ದಾಳಿ ನಿಲ್ಲಿಸಬೇಕು. ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹಂತಕರನ್ನು ಕೂಡಲೇ ಬಂಧಿಸಬೇಕೆಂದು ಸಿಡಿಆರ್‌ಓ ಶಿವಮಣಿಧನ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Next Story





