ಮಲ್ಪೆ; ಮೀನುಗಾರ ಸಮುದ್ರ ಪಾಲು
ಮಲ್ಪೆ, ಫೆ.23: ಮೀನುಗಾರಿಕೆ ನಡೆಸುತ್ತಿದ್ದ ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ನಾಪತ್ತೆಯಾದವರನ್ನು ಭಟ್ಕಳದ ಬೆಳಕೆ ಗ್ರಾಮದ ವೆಂಕಟೇಶ ಮಂಜು ಮೊಗೇರ(52) ಎಂದು ಗುರುತಿಸಲಾಗಿದೆ.
ಇವರು ಇತರ ಮೀನುಗಾರ ರೊಂದಿಗೆ ಫೆ.11ರಂದು ಮಲ್ಪೆಯ ಕೃಷ್ಣಪ್ಪ ಅಮೀನ್ ಎಂಬವರ ಶ್ರೀಪ್ರಸನ್ನ ಗಣಪತಿ ಬೋಟ್ನಲ್ಲಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು, ಫೆ.16ರಂದು ಬೆಳಗಿನ ಜಾವ ಸುಮಾರು 50 ಮೀಟರ್ ಆಳದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ವೆಂಕಟೇಶ ಮೊಗೇರ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





