ಅಣ್ಣನಿಂದ ತಮ್ಮನ ಕೊಲೆಯತ್ನ: ದೂರು
ಬೈಂದೂರು, ಫೆ.23: ಜಾಗದ ವಿವಾದಕ್ಕೆ ಸಂಬಂಧಿಸಿ, ಅಪಘಾತ ನಡೆಸಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕೊಲ್ಲೂರು- ಯಡ್ತರೆ ರಸ್ತೆಯ ಮೈಕಳ ಭೂತನಮನೆ ಎಂಬಲ್ಲಿ ಇಂದು ಬೆಳಗ್ಗೆ 10.30ರ ಸುಮಾರಿಗೆ ನಡೆದಿದೆ.
ತೆಗ್ಗರ್ಸೆ ಗ್ರಾಮದ ಮೈಕಳ ಹೆಮ್ಮಣಹಿತ್ಲುವಿನ ರಾಜು ಪೂಜಾರಿ(41) ಎಂಬವರು ಬೈಕಿನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಕಾರಿನಲ್ಲಿ ಬಂದ ಅವರ ಅಣ್ಣ ಸುಬ್ಬಯ್ಯ ಪೂಜಾರಿ ಎಂಬಾತ ಢಿಕ್ಕಿ ಹೊಡೆದಿದ್ದು, ಇದರಿಂದ ರಸ್ತೆಗೆ ಬಿದ್ದು ಗಾಯಗೊಂಡ ರಾಜು ಪೂಜಾರಿಯನ್ನು ಕೊಲೆ ಮಾಡುವ ಉದ್ದೇಶದಿಂದ ಸುಬ್ಬಯ್ಯ ಪೂಜಾರಿ ಕಬ್ಬಿಣದ ರಾಡ್ ಹಾಗೂ ಚಾಕುವಿನಿಂದ ಇರಿದು ಗಾಯಗೊಳಿಸಿ ರುವುದಾಗಿ ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





