ಭಾಷೆ
![ಭಾಷೆ ಭಾಷೆ](https://www.varthabharati.in/sites/default/files/images/articles/2018/02/24/zlkkkhd.jpg)
ಮಗುವನ್ನು ತಾಯಿ ಮನೆಯಲ್ಲಿ ಕನ್ನಡ ಮಾತನಾಡುವುದಕ್ಕೆ ಬಿಡುತ್ತಿರಲಿಲ್ಲ.
ಮಾತನಾಡಿದಾಗಲೆಲ್ಲ ತಾಯಿ ''ಇಂಗ್ಲಿಷ್ನಲ್ಲಿ ಮಾತನಾಡು'' ಎಂದು ಬೆದರಿಸುತ್ತಿದ್ದಳು.
ಅದೊಂದು ದಿನ ಅವರು ಪಕ್ಷಿಧಾಮಕ್ಕೆ ಭೇಟಿ ನೀಡಿದರು.
ತಾಯಿ ಇಂಗ್ಲಿಷ್ನಲ್ಲಿ ಹೇಳುತ್ತಿದ್ದಳು ''ಯುರೋಪ್ ಸೇರಿದಂತೆ ವಿದೇಶಗಳಿಂದ ಬಂದ ಪಕ್ಷಿಗಳು ಇಲ್ಲಿವೆ''
''ಹೌದಾ? ಹಾಗಾದರೆ ಕರ್ನಾಟಕದ ಪಕ್ಷಿಗಳ ಜೊತೆಗೆ ಅವುಗಳು ಇಂಗ್ಲಿಷ್ನಲ್ಲಿ ಮಾತನಾಡುತ್ತಾ?'' ಮಗು ಕೇಳಿತು.
ತಾಯಿ ಇಂಗ್ಲಿಷ್ನಲ್ಲೇ 'ಶಟ್ಅಪ್' ಎಂದಳು.
Next Story