ವಿಜಯಾದಬ್ಬೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಛಾಪು ಮೂಡಿಸಿದ್ದರು : ಸಚಿವೆ ಉಮಾಶ್ರೀ

ಬೆಂಗಳೂರು, ಫೆ. 24: ಕನ್ನಡ ಸಾಹಿತ್ಯದ ಸೃಜನಶೀಲ ಲೇಖಕರಲ್ಲಿ ಒಬ್ಬರಾದ ಡಾ.ವಿಜಯದಬ್ಬೆ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಶೋಕ ವ್ಯಕ್ತಪಡಿಸಿದ್ದಾರೆ.
ನಾನು ಮೆಚ್ಚಿದ ಸ್ತ್ರೀವಾದಿ ಚಿಂತಕರಲ್ಲಿ ವಿಜಯಾ ದಬ್ಬೆ ಒಬ್ಬರು. ಅವರು ಕನ್ನಡಕ್ಕೆ ಅನೇಕ ಉತ್ತಮ ಕೃತಿಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಕನ್ನಡ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಬಹಳ ಜನಪ್ರಿಯವಾಗಿದ್ದರು ಎಂದು ಉಮಾಶ್ರೀ ಸ್ಮರಿಸಿದ್ದಾರೆ.
ಕಥೆ, ಕಾವ್ಯ, ವಿಮರ್ಶೆ ಹೀಗೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ ವಿಜಯಾ ದಬ್ಬೆ ನಿಧನ ಕನ್ನಡ ಸಾಹಿತ್ಯ ಕ್ಷೇತ್ರ ಒಬ್ಬ ಉತ್ತಮ ಲೇಖಕರನ್ನು ಕಳೆದುಕೊಂಡಂತಾಗಿದೆ ಎಂದು ಉಮಾಶ್ರೀ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
Next Story





