ಬೆಂಗಳೂರು: ಫೆ.25 ರಂದು 'ಕಾರ್ಮಿಕ ಕಾನೂನು ತಿದ್ದುಪಡಿ ಮತ್ತು ಉದ್ಭವಿಸುತ್ತಿರುವ ಸವಾಲುಗಳು' ವಿಚಾರ ಸಂಕಿರಣ
ಬೆಂಗಳೂರು, ಫೆ. 24: ‘ಕಾರ್ಮಿಕ ಕಾನೂನುಗಳ ತಿದ್ದುಪಡಿ ಮತ್ತು ಉದ್ಭವಿಸುತ್ತಿರುವ ಸವಾಲುಗಳು’ ಎಂಬ ವಿಷಯದ ಕುರಿತು ಎಐಟಿಯಿಸಿ, ಭಾರತೀಯ ವಕೀಲ ಸಂಘದ ಆಶ್ರಯದಲ್ಲಿ ಫೆ.25 ರಂದು ಬೆಳಗ್ಗೆ 10:30ಕ್ಕೆ ಇಲ್ಲಿನ ಗಾಂಧಿ ಭವನದಲ್ಲಿ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಸಂದರ್ಶನ ಪ್ರಾಧ್ಯಾಪಕ ಪ್ರೊ. ಬಾಬು ಮ್ಯಾಥ್ಯೂ ಮಾತನಾಡಲಿದ್ದು, ವಕೀಲ ವಿಲಾಸ್ ರಂಗನಾಥ್ ದಾತರ್, ಭಾರತೀಯ ವಕೀಲರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಡಿ. ಹರಿಗೋವಿಂದ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





