ಸರ್ವೋಚ್ಚ ನ್ಯಾಯಾಲಯ ಮಂಡಳಿಯಿಂದ ಹೈಕೋರ್ಟ್‌ಗೆ ನೂತನ ನ್ಯಾಯಾಧೀಶರ ಆಯ್ಕೆ

ಹೊಸದಿಲ್ಲಿ, ಫೆ.24: ಅಲಹಾಬಾದ್, ರಾಜಸ್ಥಾನ, ಕೇರಳ, ಗುಜರಾತ್ ಮತ್ತು ಬಾಂಬೆ ಹೈಕೋರ್ಟ್‌ಗೆ ಶಾಶ್ವತ ನ್ಯಾಯಾಧೀಶರಾಗಿ ಆಯ್ಕೆ ಮಾಡಿದ್ದ 37 ಹೆಚ್ಚುವರಿ ನ್ಯಾಯಾಧೀಶರ ಹೆಸರುಗಳನ್ನು ಸರ್ವೋಚ್ಚ ನ್ಯಾಯಾಲಯ ಮಂಡಳಿಯು ಶುಕ್ರವಾರದಂದು ಸಾರ್ವಜನಿಕಗೊಳಿಸಿದೆ. ತಾನು ಬಾಂಬೆ, ಗುಜರಾತ್ ಮತ್ತು ರಾಜಸ್ಥಾನ ಹೈಕೋರ್ಟ್‌ಗೆ ಸೂಚಿಸಿರುವ ನ್ಯಾಯಾಧೀಶರ ಪೈಕಿ ಕೆಲವರ ಬಗ್ಗೆ ದೂರುಗಳು ಬಂದಿವೆ. ಆದರೆ ಈ ದೂರುಗಳಲ್ಲಿ ಯಾವುದೇ ಹುರುಳಿಲ್ಲ ಎಂಬುದು ಸಾಬೀತಾಗಿದೆ ಎಂದು ಮಂಡಳಿಯು ತಿಳಿಸಿದೆ. ಗುರುವಾರದಂದು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಹಾಗೂ ನ್ಯಾಯಾಧೀಶರಾದ ಜೆ. ಚೆಲಮೇಶ್ವರ್ ಮತ್ತು ರಂಜನ್ ಗೊಗೊಯಿ ಅವರನ್ನೊಳಗೊಂಡ ಮಂಡಳಿ ಸೂಚಿಸಿರುವ ಹೆಸರುಗಳನ್ನು ಶ್ರೇಷ್ಟ ನ್ಯಾಯಾಲಯದ ಜಾಲತಾಣದಲ್ಲಿ ಹಾಕಲಾಗಿತ್ತು.
Next Story





