ಕವಾಸಕಿ ಮೋಟಾರ್ ಬೈಕ್ ಮಂಗಳೂರು ಶೋರೂಂ ಶುಭಾರಂಭ

ಮಂಗಳೂರು, ಫೆ. 24: ರಾ.ಹೆ. 66ರ ಬಂಗ್ರಕೂಳೂರಿನ ಎಪ್ಸಿಲೋನ್ ಕಟ್ಟಡದಲ್ಲಿ ಕವಾಸಕಿ ಬೈಕ್‌ಗಳ ಮಂಗಳೂರು ಶೋರೂಂ ಶನಿವಾರ ಶುಭಾರಂಭಗೊಂಡಿದೆ.
ಮೋಟೊ ರ‍್ಯಾಕ್ ಸಂಸ್ಥೆಯು ಕವಾಸಕಿ ಬೈಕ್‌ಗಳ ಡೀಲರ್‌ಶಿಪ್ ವಹಿಸಿಕೊಂಡು ಈ ಶೋರೂಂ ಆರಂಭಿಸಿದ್ದು, ಕವಾಸಕಿ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಯುತಾಕಾ ಯಮಶಿತ ಅವರು ಶೋರೂಂ ಉದ್ಘಾಟಿಸಿದರು. ಈ ಸಂದರ್ಭ ಮೋಟೊ ರ‍್ಯಾಕ್ ಸಂಸ್ಥೆಯ ಆಡಳಿತ ಪಾಲುದಾರ ಅನಿಲ್ ಶಂಕರ್ ಮತ್ತು ರಿಶಕ್ ಉಪಸ್ಥಿತರಿದ್ದರು.
ಕವಾಸಕಿ ಮೋಟಾರ್ ಬೈಕ್‌ಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆ ಇದ್ದು, ದೇಶದಲ್ಲಿ 20 ಡೀಲರ್‌ಗಳಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಡೀಲರ್‌ಶಿಪ್‌ಗಳಿವೆ. 2018 ರಲ್ಲಿ ಮತ್ತೆ 10 ಡೀಲರ್‌ಶಿಪ್‌ಗಳು ದೇಶದಲ್ಲಿ ಪ್ರಾರಂಭವಾಗಲಿವೆ ಎಂದು ಯುತಾಕಾ ಯಮಶಿತ ಹೇಳಿದರು.
ಜಿಎಸ್‌ಟಿ ಜಾರಿಯಾದರೂ ದೇಶದಲ್ಲಿ ಕವಾಸಕಿ ಬೈಕ್ ಮಾರಾಟದಲ್ಲಿ ಕುಸಿತಗೊಂಡಿಲ್ಲ. ಬದಲಾಗಿ ಶೇ.30ರಷ್ಟು ಹೆಚ್ಚಳವಾಗಿದೆ. ಪ್ರೀಮಿಯರ್ ಸೆಗ್‌ಮೆಂಟ್‌ನ ಬೈಕ್ ಮಾರಾಟದಲ್ಲಿ ಕವಾಸಕಿ 2ನೆ ಸ್ಥಾನದಲ್ಲಿದೆ ಎಂದು ಯುತಾಕಾ ಯಮಶಿತ ಹೇಳಿದರು.
ಜಪಾನ್ ಮೂಲದ ಕವಾಸಕಿ ಆಧುನಿಕ ತಂತ್ರಜ್ಞಾನದ ಶಕ್ತಿಯುತ ಎಂಜಿನ್ ಹೊಂದಿದ್ದು, ಬೈಕ್‌ಪ್ರಿಯರಿಗೆ ಮುದ ನೀಡುತ್ತದೆ. ವಿವಿಧ ಸಿಸಿ ಸಾಮರ್ಥ್ಯದ ಬೈಕ್‌ಗಳನ್ನು ಕವಾಸಕಿ ಉತ್ಪಾದಿಸುತ್ತದೆ.







