ಮಹಿಳಾ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ: ದೂರು
ಕುಂದಾಪುರ, ಫೆ.24: ಕುಂದಾಪುರ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಜ್ಯೋತಿ ಎಂ.ಎಂಬವರಿಗೆ ಅವಾಚ್ಯ ಶಬ್ಧಗಳಿಂದ ಬೈದು ಬೆದರಿಕೆ ಯೊಡ್ಡಿ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.23ರಂದು ಬೆಳಗ್ಗೆ ಜ್ಯೋತಿಯ ಮೊಬೈಲ್‌ಗೆ ಕರೆ ಮಾಡಿದ ಶಿವ ಎಂಬಾತ ನೀನು ಹಾಗೂ ನಿಮ್ಮ ಠಾಣೆಯ ಪೊಲೀಸ್ ರಾಘವೇಂದ್ರ ಸೇರಿ ನನ್ನ ಗೆಳೆಯ ಟಿಂಕು ವೆಂಕಟೇಶನನ್ನು ಜಾಮೀನು ಸಿಗದ ಸೆಕ್ಷನ್ ಹಾಕಿದ್ದೀರಿ ಎಂದು ಬೆದರಿಕೆ ಹಾಕಿದ್ದನೆಂದು ದೂರಲಾಗಿದೆ. ಬಳಿಕ ಮಧ್ಯಾಹ್ನ ಕರೆ ಮಾಡಿ ಅವಾಚ್ಯ ಶಬ್ಧ ಗಳಿಂದ ಬೈದು ಬೆದರಿಕೆ ಹಾಕಿದ್ದನ್ನೆಲಾಗಿದೆ.
ಸಂಜೆ ಠಾಣೆಗೆ ಬಂದ ಶಿವ ಹಾಗೂ ಆತನ ಸ್ನೇಹಿತರಾದ ಟಿಂಕು ವೆಂಕಟೇಶ ಮತ್ತು ಗಣಪತಿ ಆಚಾರ್ಯ ಎಂಬುವರು ಅರ್ಜಿ ನೊಂದಣಿಯನ್ನು ಬರೆಯು ತ್ತಿರುವ ವೇಳೆ ಜ್ಯೋತಿಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ಧಗಳಿಂದ ಬೈದು ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





