ಶಂಕರನಾರಾಯಣ: ನಾಲ್ಕು ಗ್ರಾಪಂಗಳ ಸೋಲಾರ್ ಬ್ಯಾಟರಿ ಕಳವು
ಶಂಕರನಾರಾಯಣ, ಫೆ.24: ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ನಾಲ್ಕು ಗ್ರಾಪಂಗಳಿಂದ ಅಳವಡಿಸಲಾದ ಲಕ್ಷಾಂತರ ರೂ. ಮೌಲ್ಯದ ಸೋಲಾರ್ ದಾರಿದೀಪದ ಬ್ಯಾಟರಿಗಳನ್ನು ಕಳವು ಮಾಡಿರುವ ಬಗ್ಗೆ ವರದಿ ಯಾಗಿದೆ.
ಫೆ.23ರಂದು ರಾತ್ರಿ ವೇಳೆ ಹೆಂಗವಳ್ಳಿ ಗ್ರಾಪಂನಿಂದ ಹ್ಯೊಗೆ ಬೆಳ್ಳಾರ್ ಎಂಬಲ್ಲಿ ಅಳವಡಿಸಿದ 9,000 ರೂ. ಮೌಲ್ಯದ ಸೋಲಾರ್ ಬ್ಯಾಟರಿ, ಬೆಳ್ವೆ ಗ್ರಾಪಂ ವ್ಯಾಪ್ತಿಯ 8 ಕಡೆಗಳಲ್ಲಿ ಅಳವಡಿಸಲಾದ 40 ಸಾವಿರ ರೂ. ಮೌಲ್ಯದ 8 ಸೋಲಾರ್ ದಾರಿದೀಪದ ಬ್ಯಾಟರಿ, ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಒಟ್ಟು 13 ಕಡೆಗಳಲ್ಲಿ ಅಳವಡಿಸಲಾದ 30 ಸಾವಿರ ರೂ. ಮೌಲ್ಯದ ಸೋಲಾರ್ ದಾರಿದೀಪದ ಬ್ಯಾಟರಿ, ಶಂಕರನಾರಾಯಣ ಗ್ರಾಪಂ ವ್ಯಾಪ್ತಿಯ 3 ಕಡೆಗಳಲ್ಲಿ ಅಳವಡಿಸಲಾದ 15ಸಾವಿರ ರೂ. ಮೌಲ್ಯದ 5 ಸೋಲಾರ್ ದಾರಿದೀಪದ ಬ್ಯಾಟರಿಗಳನ್ನು ಕಳವು ಮಾಡಲಾಗಿದೆ ಎಂದು ದೂರಲಾಗಿದೆ.
Next Story





