Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇರಳ ಮಧು ಕೊಲೆ ಪ್ರಕರಣಕ್ಕೆ ಕೋಮು ಬಣ್ಣ...

ಕೇರಳ ಮಧು ಕೊಲೆ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಲು ಹೋದ ಸೆಹ್ವಾಗ್ ಕ್ಲೀನ್ ಬೌಲ್ಡ್

ವಾರ್ತಾಭಾರತಿವಾರ್ತಾಭಾರತಿ24 Feb 2018 9:36 PM IST
share
ಕೇರಳ ಮಧು ಕೊಲೆ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಲು ಹೋದ ಸೆಹ್ವಾಗ್ ಕ್ಲೀನ್ ಬೌಲ್ಡ್

ಹೊಸದಿಲ್ಲಿ, ಫೆ. 24 : ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ಮೇಲೆ ಟ್ವಿಟರ್ ನಲ್ಲಿ ಖ್ಯಾತರಾಗಿರುವ ಸ್ಪೋಟಕ ಬ್ಯಾಟ್ಸ್ ಮ್ಯಾನ್ ವೀರೇಂದ್ರ ಸೆಹವಾಗ್ ಇದರಲ್ಲಿ ಆಗಾಗ ವಿವಾದಕ್ಕೀಡಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಂಘ ಪರಿವಾರಕ್ಕೆ ಪರೋಕ್ಷ ಬೆಂಬಲ ವ್ಯಕ್ತಪಡಿಸುವ ಟ್ವೀಟ್ ಗಳನ್ನೇ ಮಾಡುವ ಸೆಹ್ವಾಗ್ ಇದೀಗ ಮತ್ತೆ ಇಂತಹದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. 

ಈ ಹಿಂದೆ ಹುತಾತ್ಮ ಯೋಧರೊಬ್ಬರ ಪುತ್ರಿ ಗುರ್ಮೇಹರ್ ಕೌರ್ ನನ್ನ ತಂದೆ ಯುದ್ಧದಿಂದ ಮೃತಪಟ್ಟಿದ್ದು , ಯಾವುದೇ ದೇಶದಿಂದಾಗಿ ಅಲ್ಲ ಎಂಬರ್ಥದ ಟ್ವೀಟ್ ಮಾಡಿದ್ದಕ್ಕೆ ಆಕೆಯ ವಿರುದ್ಧ ಸಂಘ ಪರಿವಾರದ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಮುಗಿಬಿದ್ದಿದ್ದರು. ಆಕೆಗೆ ಅತ್ಯಾಚಾರ, ಕೊಲೆ ಬೆದರಿಕೆಗಳೂ ಬಂದಿದ್ದವು. ಆಗ ಆಕೆಯನ್ನೇ ಪರೋಕ್ಷವಾಗಿ ವ್ಯಂಗ್ಯ ಮಾಡುವ ಟ್ವೀಟ್ ಮಾಡಿದ್ದ ಸೆಹ್ವಾಗ್ ಸಂಘ ಪರಿವಾರದ ಪ್ರಶಂಸೆಗೆ ಹಾಗು ಇತರರ ಟೀಕೆಗೆ ಗುರಿಯಾಗಿದ್ದರು. ಈಗ ಮತ್ತೆ ಸೆಹ್ವಾಗ್ ವಿವಾದದಲ್ಲಿರುವುದು ಅಮಾನವೀಯ ಪ್ರಕರಣವೊಂದಕ್ಕೆ ಧರ್ಮದ ಹಣೆಪಟ್ಟಿ ಹಚ್ಚುವ ಯತ್ನದ ಮೂಲಕ. 

ಇತ್ತೀಚಿಗೆ ಕೇರಳದಲ್ಲಿ ಅಕ್ಕಿ ಕದ್ದ ಎಂಬ ನೆಪದಲ್ಲಿ ಆದಿವಾಸಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನನ್ನು ಹತ್ತಕ್ಕೂ ಹೆಚ್ಚು ಮಂದಿ ಸೇರಿ ಚಿತ್ರಹಿಂಸೆ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಪೊಲೀಸರು ಆತನನ್ನು ಆಸ್ಪತ್ರೆಗೆ ಸೇರಿಸುವ ಮೊದಲೇ ಆತ ಪ್ರಾಣಬಿಟ್ಟಿದ್ದ. ಚಿತ್ರಹಿಂಸೆ ನೀಡುವಾಗ ಯುವಕನೊಬ್ಬ ಅಲ್ಲೇ ನಿಂತು ಸೆಲ್ಫಿ ತೆಗೆದು ಅದನ್ನು ಫೇಸ್ ಬುಕ್ ಗೆ ಹಾಕಿದ್ದ.  ಈ ಅಮಾನವೀಯ ಘಟನೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಯಿತು.  ಜಾತಿ, ಧರ್ಮ, ಪಕ್ಷ ಭೇದ ಮರೆತು ಎಲ್ಲರೂ ಇದನ್ನು ಖಂಡಿಸಿದ್ದರು. 
ಈ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಸೆಹ್ವಾಗ್ ಇಡೀ ಘಟನೆಯನ್ನು ಒಂದು ಸಮುದಾಯದ ತಲೆಗೆ ಕಟ್ಟಲು ಪ್ರಯತ್ನಿಸಿದ್ದಾರೆ. 

Madhu stole 1 kg rice. A mob of Ubaid , Hussain and Abdul Kareem lynched the poor tribal man to death. This is a disgrace to a civilised society and I feel ashamed that this happens and kuch farak nahi padta. ( ಮಧು ಒಂದು ಕೆಜಿ ಅಕ್ಕಿ ಕದ್ದಿದ್ದಾನೆ. ಉಬೈದ್ , ಹುಸೇನ್ ಹಾಗು ಅಬ್ದುಲ್ ಕರೀಂ ಅವರ ಗುಂಪು ಆ ಬಡ ಆದಿವಾಸಿ ವ್ಯಕ್ತಿಯನ್ನು ಕೊಂದು ಹಾಕಿದ್ದಾರೆ. ಇದು ಇಡೀ ನಾಗರೀಕ ಸಮಾಜಕ್ಕೆ ಕಳಂಕವಾಗಿದೆ. ಇಂತಹದ್ದು ನಡೆಯುತ್ತದೆ ಹಾಗು ಇದರಿಂದ ಯಾವುದೇ ಪರಿಣಾಮ ಆಗುವುದಿಲ್ಲ ಎಂದರೆ ನನಗೆ ನಾಚಿಕೆಯಾಗುತ್ತದೆ ") ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. 

ಸೆಹ್ವಾಗ್ ರ ಈ ಟ್ವೀಟ್ ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮಧು ಮೇಲಿನ ಅಮಾನವೀಯ ಹಲ್ಲೆ ಹಾಗು ಆತನ ಸಾವಿನ ಬಗ್ಗೆ ಎಲ್ಲರಿಗೂ ನೋವಿದೆ. ಆದರೆ ಇಡೀ ಘಟನೆಯನ್ನು ಒಂದು ಸಮುದಾಯದ ತಲೆಗೆ ಕಟ್ಟಲು ಸೆಹ್ವಾಗ್ ಮಾಡಿರುವ ಪ್ರಯತ್ನಕ್ಕೆ ಎಲ್ಲ ಧರ್ಮೀಯರು ಒಕ್ಕೊರಲಿನಿಂದ ಖಂಡಿಸಿದ್ದಾರೆ. ವಿನೋದ್ ದುಆ ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು " ನೀವು ಇನ್ನೆಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ? ಅಲ್ಲಿದ್ದದ್ದು ಕೇವಲ ಮೂವರು ಮುಸಲ್ಮಾನರಲ್ಲ,  ಹಿಂದೂ , ಕ್ರೈಸರೂ ಆ ತಂಡದಲ್ಲಿದ್ದರು. ಒಟ್ಟು ಹತ್ತಕ್ಕೂ ಹೆಚ್ಚು ಮಂದಿಯಲ್ಲಿ ನಿಮಗೆ ಈ ಮೂರು ಹೆಸರುಗಳು ಮಾತ್ರ ಕಂಡವೇ ? ಈ ಚಮಚಾಗಿರಿಗೆ ನಿಮಗೆ ಬಿಜೆಪಿ ಟಿಕೆಟ್ ಸಿಗಬಹುದು " ಎಂದು ಟೀಕಿಸಿದ್ದಾರೆ. 

" ಅಲ್ಲಿ ಮುರಳಿ, ಮನು, ಮಚ್ಚತನ್ ಎಂಬವರೂ ಇದ್ದರು. ನೀವು ಹೀಗೆ ಬೊಗಳಿದ್ದಕ್ಕೆ ನಿಮಗೆ ಸೂಕ್ತ ಪ್ರತಿಫಲ ಸಿಗಬಹುದು. ಆದರೆ ಹೀಗೆ ಸುಳ್ಳು ಹರಡಬೇಡಿ " ಎಂದು ಓಂ ಪ್ರಕಾಶ್ ಚೌಧರಿ ಎಂಬವರು ಚಾಟಿ ಬೀಸಿದ್ದಾರೆ. 
ಇನ್ನೂ ಹಲವರು ಸೆಹ್ವಾಗ್ ರ ಕೋಮು ಬಣ್ಣ ಹಚ್ಚುವ ಪ್ರಯತ್ನವನ್ನು ಖಂಡಿಸಿದ್ದಾರೆ. 

Madhu stole 1 kg rice. A mob of Ubaid , Hussain and Abdul Kareem lynched the poor tribal man to death. This is a disgrace to a civilised society and I feel ashamed that this happens and kuch farak nahi padta. pic.twitter.com/LXSnjY6sF0

— Virender Sehwag (@virendersehwag) February 24, 2018

और कितना नीचे गिरोगे सहवाग ? मधु को मारने वाली भीड़ में सिर्फ ये 3 मुसलमान ही नही थे, बल्कि हिन्दू और ईसाई भी शामिल थे, कुल 10 से ज्यादा लोग थे किंतु आपको सिर्फ 3 ही नाम दिखाई दिये?
शायद इसी चमचागिरी की वजह से आपको भाजपा से टिकट मिलेगाhttps://t.co/AfSLvrHPRA

— Vinod Dua (@_VinodDua) February 24, 2018

"The saffron mundu" .. muslims dont wear these mundu in kerala.. and please don't mix religion in this tragedy :( pic.twitter.com/3OI0qhgduN

— Rashid (@rash5053) February 24, 2018

Full story - It was a mob of more than 10 people. Murali, Manu and Mathachan are the names of some of the others in the mob. But thanks for posting this. Your dog-whistling has been duly noted and I hope you get rewarded for it.
And please don't spread lies.

— omprakash chaudhary (@MatwaOmprakash) February 24, 2018
share
ವಾರ್ತಾಭಾರತಿ
ವಾರ್ತಾಭಾರತಿ
Next Story
X