ಫೆ. 27: ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಾವೇಶ
ಉಡುಪಿ, ಫೆ.24: ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ವತಿಯಿಂದ ಜಿಲ್ಲಾ ಮಟ್ಟದ ಸಮಾವೇಶವನ್ನು ಫೆ.27ರಂದು ಬೆಳಗ್ಗೆ 10ಗಂಟೆಗೆ ತೆಕ್ಕಟ್ಟೆ ಗ್ರೇಸ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮಾವೇಶವನ್ನು ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷ ವೈ. ಸಯೀದ್ ಅಹಮದ್ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ವಹಿಸಲಿರುವರು ಎಂದು ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಆತ್ರಾಡಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ, ಸಚಿವ ರಾದ ಪ್ರಮೋದ್ ಮಧ್ವರಾಜ್, ರಮಾನಾಥ ರೈ, ಕೆ.ಜೆ.ಜಾರ್ಜ್, ಯು.ಟಿ. ಖಾದರ್, ತನ್ವೀರ್ ಸೇಠ್, ರೋಷನ್ ಬೇಗ್, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮೊದಲಾದವರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಮುಸ್ತಾಕ್ ಅಹ್ಮದ್ ಬೆಳ್ವೆ, ಉಪಾಧ್ಯಕ್ಷರಾದ ಜೆರಾಲ್ಡ್ ನ್ಯೂಟ್ರನ್ ಕ್ರಾಸ್ತಾ, ಐಡಾ ಗಿಬ್ಬಾ ಡಿಸೋಜ, ಹಸನ್ ಶೇಖ್ ಮಣಿ ಪುರ, ಯಾಸೀನ್ ಹೆಮ್ಮಾಡಿ, ಸಿರಾಜ್ ಉಚ್ಚಿಲ, ಗಿಲ್ಬರ್ಟ್ ಡಿಸಿಲ್ವ ಉಪಸ್ಥಿತ ರಿದ್ದರು.





