Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ26 Feb 2018 12:27 AM IST
share
ಓ ಮೆಣಸೇ..

ತ್ರಿವಳಿ ತಲಾಖ್‌ನಂತಹ ಪದ್ಧತಿಯನ್ನು ರದ್ದು ಮಾಡಿರುವುದರಿಂದ ಮುಸ್ಲಿಂ ಮಹಿಳೆಯರ ಮತಗಳು ಖಂಡಿತಾ ಬಿಜೆಪಿಗೆ ಸಿಗಲಿದೆ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ಮತ ಕೊಟ್ಟು ತಮ್ಮ ಕುಟುಂಬವನ್ನು ಜೈಲಿಗೆ ತಳ್ಳುವುದಕ್ಕೆ ಮುಸ್ಲಿಮ್ ಮಹಿಳೆಯರು ಜಶೋದಾ ಬೆನ್‌ನಷ್ಟು ದಡ್ಡಿಯರಲ್ಲ.
---------------------
ರಾಹುಲ್ ಗಾಂಧಿ ಪ್ರಚಾರ ಮಾಡಿದ ಕಡೆಯಲ್ಲೆಲ್ಲಾ ವಿರೋಧ ಪಕ್ಷಗಳೇ ಗೆದ್ದಿವೆ - ಪ್ರಹ್ಲಾದ್ ಜೋಶಿ, ಸಂಸದ
ಬಹುಶಃ ಬಿಜೆಪಿಗೆ ಈಗ ಇದೊಂದೇ ಭರವಸೆ ಎನ್ನುತ್ತೀರಾ?
---------------------
ಪ್ರಜಾಸತ್ತೆ ಎನ್ನುವುದು ಬಿಜೆಪಿಯ ಮೂಲ ತತ್ವ - ನರೇಂದ್ರ ಮೋದಿ, ಪ್ರಧಾನಿ
ನೋಟು ನಿಷೇಧದಲ್ಲಿ ಸತ್ತ ಪ್ರಜೆಗಳ ಲೆಕ್ಕ ನೋಡುವಾಗ ನಿಜ ಅನ್ನಿಸುತ್ತದೆ.
---------------------
ಲೋಕ ಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪಿಸುವ ಮೂಲಕ ಪ್ರಧಾನಿ ನನ್ನನ್ನು ರಾಷ್ಟ್ರ ನಾಯಕನನ್ನಾಗಿ ಮಾಡಿದ್ದಾರೆ -ಸಿದ್ದರಾಮಯ್ಯ, ಮುಖ್ಯಮಂತ್ರಿ
ಕಾಂಗ್ರೆಸ್ ನಾಯಕರು ನಿಮ್ಮನ್ನು ರಾಷ್ಟ್ರನಾಯಕರನ್ನಾಗಿ ಮಾಡಿಲ್ಲದೇ ಇರುವುದರ ಬಗ್ಗೆ ಆಕ್ಷೇಪವೇ?
---------------------
ನನ್ನ ಹೆಸರಲ್ಲೇ ರಾಮ ಇದ್ದಾನೆ - ರಮಾನಾಥ ರೈ, ಸಚಿವ
ಅದು ರಾಮ ಅಲ್ಲ, ರಮ್ ಎನ್ನುವುದು ಪೂಜಾರಿಯವರ ಕುಟುಕು.
---------------------
ಹಣ, ಹೆಸರಿಗಾಗಿ ಕಮಲ್ ಹಾಸನ್ ರಾಜಕೀಯಕ್ಕೆ ಬಂದಿಲ್ಲ - ರಜನಿಕಾಂತ್, ನಟ
ನೀವು ಅದಕ್ಕಾಗಿ ಬಂದಿದ್ದೀರಿ ಎಂದಾಯಿತು. 
---------------------
ಮುಂದಿನ ದಿನಗಳಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ - ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಅಧ್ಯಕ್ಷ
ನಿಮ್ಮ ಅಳಿಗಾಲ ಆರಂಭವಾಗಿರುವ ಸಂಕೇತ ಅದು.
---------------------
ರಾಜಕೀಯ ಎನ್ನುವುದು ಚರಂಡಿಯಿದ್ದಂತೆ ಯಾರು ಬೇಕಾದರೂ ಅದರೊಳಗೆ ಬೀಳಬಹುದು -ಎಂ.ಕೆ.ಅಳಗಿರಿ, ಡಿಎಂಕೆ ಉಚ್ಛಾಟಿತ ನಾಯಕ
ಅದರೊಳಗೆ ಬಿದ್ದ ಮೇಲೆ ಹೊಳೆದ ಮಾತು.
---------------------
ಜೈಲಿಗೆ ಹೋಗಿ ಬಂದವರನ್ನು ಕಾಂಗ್ರೆಸ್ ತನ್ನತ್ತ ಸೆಳೆದುಕೊಳ್ಳುತ್ತಿದೆ - ಶ್ರೀರಾಮುಲು, ಸಂಸದ
ಯಡಿಯೂರಪ್ಪರಂಥವರನ್ನು ಕಟ್ಟಿಕೊಂಡು ಕಾಂಗ್ರೆಸ್ ಮಾಡುವುದೇನು?
---------------------
ಲೋಕಾಯುಕ್ತ ಇದ್ದಿದ್ದರೆ ಕಾಂಗ್ರೆಸ್‌ನ ಹಲವು ಸಚಿವರು ಜೈಲಿನಲ್ಲಿರುತ್ತಿದ್ದರು - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಅನುಭವದ ಮಾತು.
---------------------
ಸಿದ್ದರಾಮಯ್ಯ ವಾರಕ್ಕೊಮ್ಮೆ ಬೀಗರ ಊಟಕ್ಕೆ ಮೈಸೂರಿಗೆ ಬರುತ್ತಾರೆ - ಪ್ರತಾಪ್‌ಸಿಂಹ, ಸಂಸದ
ತಮ್ಮ ಪಕ್ಷದಲ್ಲಿ ಬೀಗರ ಊಟಕ್ಕೆ ಜೈಲಿಗೆ ಹೋಗಿ ಬರುವವರು ಇದ್ದಾರೆ. ಆ ಬಗ್ಗೆ ಏನಾದರೂ ಹೇಳಿ.
---------------------
ಜಗತ್ತಿಗೆ ಶಾಸ್ತ್ರ ಮತ್ತು ಶಸ್ತ್ರ ಪರಿಚಯಿಸಿದ ಹಿಂದೂ ಧರ್ಮ ಎಲ್ಲರಿಗೂ ಹಿತವನ್ನೇ ಬಯಸುತ್ತದೆ -ನಳಿನ್ ಕುಮಾರ್ ಕಟೀಲು, ಸಂಸದ
ಈ ಶಾಸ್ತ್ರ ಮತ್ತು ಶಸ್ತ್ರಕ್ಕೆ ಬಲಿಯಾದ ಈ ದೇಶದ ಕೆಳವರ್ಗದ ಜನರು ನಿಮ್ಮ ಮಾತನ್ನು ನಂಬುವುದು ಕಷ್ಟ.
---------------------
ಸಿದ್ದರಾಮಯ್ಯರದ್ದು ದಪ್ಪ ಚರ್ಮದ ಸರಕಾರ - ಶೋಭಾ ಕರಂದ್ಲಾಜೆ, ಸಂಸದೆ
ತಮಗೆ ಮೆದು ಚರ್ಮವೇ ಇಷ್ಟ ಎಂದು ಇದರರ್ಥವೇ?
---------------------
ಎಚ್.ಡಿ.ಕುಮಾರಸ್ವಾಮಿಯವರಿಗೆ ಸುಳ್ಳು ಹೇಳಲು ಸಹ ಬರುವುದಿಲ್ಲ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ಕಾಂಗ್ರೆಸ್‌ನವರು ಸ್ವಲ್ಪ ಅದನ್ನು ಕಲಿಸಬಾರದೇ?
---------------------
ಗೋಮಾಂಸ ತಿನ್ನಿ, ಆದರೆ ಸಂಭ್ರಮಾಚರಣೆ ಬೇಡ - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ಈ ದೇಶದಲ್ಲಿ ಬಡವರಿಗೆ ಮಾಂಸಾಹಾರ ಸಿಕ್ಕಿದ ದಿನವೇ ಸಂಭ್ರಮದ ದಿನ ಎನ್ನುವುದು ನಿಮಗಿನ್ನೂ ಗೊತ್ತಿಲ್ಲ.
---------------------
ಬ್ಯಾಂಕಿಂಗ್ ವ್ಯವಸ್ಥೆಗೆ ಮೋಸ ಮಾಡುವವರನ್ನು ಸರಕಾರ ಸುಮ್ಮನೆ ಬಿಡುವುದಿಲ್ಲ - ಅರುಣ್ ಜೇಟ್ಲಿ, ಕೇಂದ್ರ ಸಚಿವ
ಕೈ ಕಾಲು ಕಟ್ಟಿ ವಿದೇಶಕ್ಕೆ ರವಾನೆ ಮಾಡುತ್ತೀರಾ?
---------------------
ಬಿಜೆಪಿ ಅಧಿಕಾರಕ್ಕೆ ಬರುವುದು, ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಶತಃಸಿದ್ಧ - ಜೆ.ಎಂ.ಸಿದ್ದೇಶ್ವರ, ಸಂಸದ
ಅದನ್ನು ತಡೆಯಲು ಬಿಜೆಪಿಯೊಳಗೆ ಭಾರೀ ಪ್ರಯತ್ನ ನಡೆಯುತ್ತಿದೆ, ಹೆದರಬೇಡಿ
---------------------
ರಜನಿಕಾಂತ್ ಮತ್ತು ಕಮಲ್ ಹಾಸನ್ ಕಾಗದದ ಹೂವಿನಂತೆ - ಎಂ.ಕೆ.ಸ್ಟಾಲಿನ್, ಡಿಎಂಕೆ ಕಾರ್ಯಾಧ್ಯಕ್ಷ
ಕರುಣಾನಿಧಿಯವರು ಕಾಗದದ ಹುಲಿ.
---------------------
ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂ ತೀರ್ಪು ನನಗೆ ತೃಪ್ತಿ ತಂದಿಲ್ಲ - ದೇವೇಗೌಡ, ಮಾಜಿ ಪ್ರಧಾನಿ
ಇದು ರಾಜಕೀಯ ಬಾಯಾರಿಕೆ
---------------------
ಪ್ರಪಂಚ ಇರುವವರೆಗೆ ಅಪರಾಧಗಳಿರುತ್ತವೆ - ರಾಮಲಿಂಗಾರೆಡ್ಡಿ, ಸಚಿವ
ಹಾಗಾದರೆ ಕಾನೂನು ಸುವ್ಯವಸ್ಥೆಯ ಅಗತ್ಯವಿಲ್ಲ ಎನ್ನುತ್ತೀರಾ?
---------------------
ನಾನು ಜಿಗಣೆಯಂತೆ; ಹಿಡಿದರೆ ಬಿಡೋಲ್ಲ - ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ
ದೇಶವನ್ನು ಕಚ್ಚಿಕೊಂಡಿರುವ ಜಿಗಣೆ.
---------------------
ಶೋಭಾ-ಯಡಿಯೂರಪ್ಪ ಮದುವೆ ಸೀಡಿ ನನ್ನ ಬಳಿ ಇದೆ - ಪದ್ಮನಾಭ ಪ್ರಸನ್ನಕುಮಾರ್, ಕೆಜೆಪಿ ಸ್ಥಾಪಕ
ಪ್ರಸ್ಥ ಸಿಡಿ ಇದೆ ಎಂದು ಹೇಳಿದರೆ ಟಿವಿಯವರು ಓಡಿ ಬರಬಹುದು.
---------------------
ಅವಕಾಶ ಸಿಕ್ಕಿದರೆ ಪಾಕಿಸ್ತಾನದಲ್ಲಿ ಸ್ಪರ್ಧಿಸುವೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
ಸದ್ಯಕ್ಕೆ ಭಾರತದಲ್ಲಂತೂ ನಿಮಗೆ ಅವಕಾಶ ಸಿಗಲಾರದು 

share
ಪಿ.ಎ.ರೈ
ಪಿ.ಎ.ರೈ
Next Story
X