ಶ್ರೀದೇವಿ ‘ಆಕಸ್ಮಿಕವಾಗಿ ನೀರಲ್ಲಿ ಮುಳುಗಿ’ ಸಾವನ್ನಪ್ಪಿದರು : ದುಬೈ ಫೋರೆನ್ಸಿಕ್ ವರದಿ

ದುಬೈ,ಫೆ.26 : ಹಿರಿಯ ನಟಿ ಶ್ರೀದೇವಿ ಅವರು ಆಕಸ್ಮಿಕವಾಗಿ ಬಾತ್ ಟಬ್ ನ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ದುಬೈ ಫೊರೆನ್ಸಿಕ್ ವರದಿ ತಿಳಿಸಿದೆ. ಪತಿಯ ಸಂಬಂಧಿಯೊಬ್ಬರ ವಿವಾಹ ಕಾರ್ಯಕ್ರಮಕ್ಕೆಂದು ಹೋಗಿದ್ದ ಶ್ರೀದೇವಿ ಅಲ್ಲಿ ತಂಗಿದ್ದ ಹೋಟೆಲ್ ನಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆಂದು ಈ ಮೊದಲು ವರದಿಯಾಗಿತ್ತು.
ಈ ಹಿಂದಿನ ವರದಿಯ ಪ್ರಕಾರ ಶ್ರೀದೇವಿ ತಾವು ತಂಗಿದ್ದ ಜುಮೇರಾಹ್ ಎಮಿರೇಟ್ಸ್ ಟವರ್ ಹೋಟೆಲ್ ಕೊಠಡಿಯ ಬಾತ್ ರೂಮಿನ ಬಾತ್ ಟಬ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವಿಧಿ ವಿಜ್ಞಾನ ಪ್ರಯೋಗಾಲಯ ತಿಳಿಸಿದ್ದಾಗಿ ವರದಿಯಾಗಿತ್ತು.
ನಟಿಯ ಅಂತ್ಯಕ್ರಿಯೆ ಇಂದು ನಡೆಯುವುದೆಂದು ಹೇಳಲಾಗಿದ್ದರೂ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿವೆ.


Next Story





