ರೈಲುಗಳಲ್ಲಿ ಮಲಗುವ ಸೀಟು: ಮಹಿಳಾ ಪ್ರಯಾಣಿಕರಿಗೆ ಮೊದಲ ಆದ್ಯತೆ

ಹೊಸದಿಲ್ಲಿ, ಫೆ.26: ರೈಲುಗಳಲ್ಲಿ ಮಹಿಳೆಯರಿಗೆ ಮೀಸಲಾಗಿರುವ ‘ಬರ್ತ್’(ಮಲಗುವ ಸೀಟು)ಗಳು ಬಳಕೆಯಾಗದಿದ್ದ ಸಂದರ್ಭ ಆ ಸೀಟುಗಳನ್ನು ‘ವೆಯ್ಟಿಂಗ್ ಲಿಸ್ಟ್’ನಲ್ಲಿರುವ ಮಹಿಳಾ ಪ್ರಯಾಣಿಕರಿಗೆ ಮೊದಲ ಆದ್ಯತೆಯಲ್ಲಿ ನೀಡಲು ರೈಲ್ವೇ ಮಂಡಳಿ ನಿರ್ಧರಿಸಿದೆ.
ಹಿರಿಯ ನಾಗರಿಕರಿಗೆ ನಂತರದ ಆದ್ಯತೆ ನೀಡಲಾಗುವುದು ಎಂದು ಮಂಡಳಿ ತಿಳಿಸಿದೆ. ಈಗ ಈ ರೀತಿ ಖಾಲಿಯಿರುವ ಸೀಟುಗಳನ್ನು ಲಿಂಗ ಭೇದವನ್ನು ಗಮನಿಸದೆ ವೆಯ್ಟಿಂಗ್ ಲಿಸ್ಟ್‌ನಲ್ಲಿದ್ದವರಿಗೆ ನೀಡಲಾಗುತ್ತಿದೆ. ಮಹಿಳೆಯರಿಗೆ ಮೀಸಲಾಗಿರುವ ‘ಬರ್ತ್’ಗಳು ಖಾಲಿಯಿದ್ದರೆ ಅವನ್ನು ಇತರ ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ಪರಿಶೋಧಕರು ಹಂಚಿಕೆ ಮಾಡಬೇಕು ಎಂದು ಮಂಡಳಿ ತಿಳಿಸಿದೆ.
ಪ್ರತೀ ಸ್ಲೀಪರ್ ಕ್ಲಾಸ್ ಕೋಚ್‌ನ ಆರು ‘ಲೋವರ್ ಬರ್ತ್’ ಸೀಟುಗಳು, ಎಸಿ 3 - ಟೈರ್ ಮತ್ತು ಎಸಿ 2-ಟೈರ್ ಕೋಚ್‌ನ ಮೂರು ‘ಲೋವರ್ ಬರ್ತ್’ ಸೀಟುಗಳು ಹಿರಿಯ ನಾಗರಿಕರು, 45 ವರ್ಷ ಮೀರಿದ ಮಹಿಳಾ ಪ್ರಯಾಣಿಕರು ಹಾಗೂ ಗರ್ಭಿಣಿ ಮಹಿಳೆಯರಿಗೆ ಮೀಸಲಾಗಿದೆ.
Next Story





