ಶ್ರೀದೇವಿ ನಿಧನ ದೊಡ್ಡ ನಷ್ಟ: ಸಚಿವೆ ಉಮಾಶ್ರೀ

ಬೆಂಗಳೂರು, ಫೆ. 25: ಭಾರತ ಚಿತ್ರರಂಗದ ಹೆಸರಾಂತ ನಟಿ, ಬಹುಭಾಷಾ ತಾರೆ, ಅದ್ಭುತ ಕಲಾವಿದೆ ಶ್ರೀದೇವಿ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಚಿತ್ರರಂಗ ಕಂಡ ಅದ್ಭುತ ಪ್ರತಿಭೆಗಳಲ್ಲಿ ಶ್ರೀದೇವಿ ಒಬ್ಬರು. ಸೌಂದರ್ಯದ ಖನಿ ಮತ್ತು ಪ್ರತಿಭೆಯ ಗಣಿ ಎರಡೂ ಆಗಿದ್ದ ಶ್ರೀದೇವಿ ನಿಧನ ಅಕಾಲಿಕವಾದುದ್ದು. ಈ ಸುದ್ಧಿ ಕೇಳಿ ಆಘಾತವಾಗಿದೆ. ಕನ್ನಡ ಚಿತ್ರರಂಗವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ನಟಿಸಿ, ಮನೆಮಾತಾಗಿದ್ದರು ಎಂದು ಸ್ಮರಿಸಿದ್ದಾರೆ.
ಶ್ರೀದೇವಿ ಭಾರತೀಯ ಚಿತ್ರರಂಗದಲ್ಲಿ ಗಳಿಸಿದ ಜನಪ್ರಿಯತೆ ಮತ್ತು ಮೂಡಿಸಿದ ಛಾಪು ಅದ್ವಿತೀಯವಾದುದ್ದು. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಬಹುತೇಕ ಎಲ್ಲ ನಾಯಕ ನಟರ ಜತೆ ನಾಯಕಿಯಾಗಿ ಜನಮನ ಸೂರೆಗೊಂಡಿದ್ದ ಶ್ರೀದೇವಿ ನಿಧನ ನಿಜಕ್ಕೂ ದೊಡ್ಡ ನಷ್ಟ ಎಂದು ಅವರು ಬಣ್ಣಿಸಿದ್ದಾರೆ.
ಭಗವಂತನು ಅವರ ಕುಟುಂಬಕ್ಕೆ ಶ್ರೀದೇವಿ ನಿಧನವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ಸಚಿವೆ ಉಮಾಶ್ರೀ ತಮ್ಮ ಶೋಧ ಸಂದೇಶದಲ್ಲಿ ತಿಳಿಸಿದ್ದಾರೆ.
Next Story





