Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪ್ರಪಂಚದಲ್ಲಿ ಹೆಣ್ಣಿನ ಸ್ಥಾನವೇ...

ಪ್ರಪಂಚದಲ್ಲಿ ಹೆಣ್ಣಿನ ಸ್ಥಾನವೇ ದೊಡ್ಡದು: ಸುಕ್ರಿ ಬೊಮ್ಮಗೌಡ

‘ಕರಾವಳಿ ಕರ್ನಾಟಕದ ಬುಕಟ್ಟು-ವರ್ತಮಾನ’ ವಿಚಾರಸಂಕಿರಣ

ವಾರ್ತಾಭಾರತಿವಾರ್ತಾಭಾರತಿ26 Feb 2018 8:28 PM IST
share
ಪ್ರಪಂಚದಲ್ಲಿ ಹೆಣ್ಣಿನ ಸ್ಥಾನವೇ ದೊಡ್ಡದು: ಸುಕ್ರಿ ಬೊಮ್ಮಗೌಡ

ಕುಂದಾಪುರ, ಫೆ. 26: ಪ್ರಪಂಚದಲ್ಲಿ ಗಂಡು ಅಥವಾ ಹೆಣ್ಣಲ್ಲಿ ಯಾರು ಮಿಗಿಲು ಎನ್ನುವಾಗ ಹೆಣ್ಣೇ ಮಿಗಿಲು. ಪ್ರಪಂಚದಲ್ಲಿ ಹೆಣ್ಣಿನ ಸ್ಥಾನವೇ ದೊಡ್ಡದು. ಇಡೀ ಜಗತ್ತಿಗೆ ಹಾಲು ಅನ್ನ ಕೊಡುವವಳು ಮಹಾತಾಯಿ, ಜಗನ್ಮಾತೆ ಪಾರ್ವತಿ. ದೇಶ ಒಳ್ಳೆಯದಾಗಿ ಸುಸ್ಥಿತಿಯಲ್ಲಿರುವುದಕ್ಕೆ ಪಾರ್ವತಿ ಯನ್ನು ಸುಖಿಯಾಗಿ ಇರಿಸಬೇಕು ಎಂದು ಪದ್ಮಶ್ರೀ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತ ಜಾನಪದ ಹಾಡುಗಾರ್ತಿ ಸುಕ್ರಿ ಬೊಮ್ಮಗೌಡ ಹೇಳಿದ್ದಾರೆ.

ಸ್ಥಳೀಯ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ವಜ್ರ ಮಹೋತ್ಸವ, ಮಾಹೆಯ ಬೆಳ್ಳಿಹಬ್ಬ ಹಾಗೂ ಭಂಡಾರ್‌ಕಾರ್ಸ್‌ ಕಾಲೇಜಿನ 55ನೇ ವರ್ಷಾಚರಣೆ ಪ್ರಯುಕ್ತ ಹಮ್ಮಿ ಕೊಂಡಿರುವ ‘ಕರಾವಳಿ ಕರ್ನಾಟಕದ ಬುಡಕಟ್ಟುಗಳು ಹಾಗೂ ವರ್ತಮಾನ’ ಕುರಿತ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಬುಡಕಟ್ಟು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷತೆ ಹಿಸಿ ಅವರು ಮಾತನಾಡುತಿದ್ದರು.

ಹಾಲು ಅನ್ನ ಕೊಡುವವರೇ ಹಾಲಕ್ಕಿಗಳು. ಬಡತನವಾದರೂ ಪರವಾಗಿಲ್ಲ ಹಾಲು ಹಾಗೂ ಅನ್ನಕ್ಕೆ ಕೊರತೆಯಾಗಬಾರದು ಎಂಬುದು ಬುಡಕಟ್ಟು ಜನರ ಪದ್ಧತಿ. ಈ ಬುಡಕಟ್ಟು ಸಮುದಾಯವಿಲ್ಲದೆ ನಾಡಿನ ಅಭಿವೃದ್ಧಿ ಅಸಾಧ್ಯ ಎಂದು ಹಾಲಕ್ಕಿ ಒಕ್ಕಲಿಗ ಸಮುದಾಯದ ಸುಕ್ರಿ ಬೊಮ್ಮಗೌಡ ಹೇಳಿದರು.

ಕುಂದಾಪುರದ ಇಷ್ಟೊಂದು ಒಳ್ಳೆಯ ಸಂಸ್ಥೆಯಲ್ಲಿ ಬುಡಕಟ್ಟು ಜನರ ಏಳ್ಗೆ ಗೋಸ್ಕರ ಕಾರ್ಯಕ್ರಮ ನಡೆಯುತ್ತಿರುವುದೇ ಸಂತೋಷದ ವಿಷಯ.ಇಲ್ಲಿ ಡಾಕ್ಟರುಗಳಿದ್ದಾರೆ. ಇವರೆಲ್ಲ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಒಳ್ಳೆಯ ಆಸ್ಪತ್ರೆಯನ್ನು ತೆರೆಯಲಿ ಎನ್ನುವುದು ನನ್ನ ಆಸೆಯಾಗಿದೆ ಎಂದವರು ನುಡಿದರು. ಕಾರ್ಯಕ್ರಮದಲ್ಲಿ ಸುಕ್ರಿ ಬೊ್ಮು ಗೌಡರನ್ನು ಸನ್ಮಾನಿಸಲಾಯಿತು.

ಕುಂದಾಪುರದ ಇಷ್ಟೊಂದು ಒಳ್ಳೆಯ ಸಂಸ್ಥೆಯಲ್ಲಿ ಬುಡಕಟ್ಟು ಜನರ ಏಳ್ಗೆ ಗೋಸ್ಕರ ಕಾರ್ಯಕ್ರಮ ನಡೆಯುತ್ತಿರುವುದೇ ಸಂತೋಷದ ವಿಷಯ.ಇಲ್ಲಿ ಡಾಕ್ಟರುಗಳಿದ್ದಾರೆ. ಇವರೆಲ್ಲ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಒಳ್ಳೆಯ ಆಸ್ಪತ್ರೆಯನ್ನು ತೆರೆಯಲಿ ಎನ್ನುವುದು ನನ್ನ ಆಸೆಯಾಗಿದೆ ಎಂದವರು ನುಡಿದರು.

ಕಾರ್ಯಕ್ರಮದಲ್ಲಿ ಸುಕ್ರಿ ಬೊಮ್ಮ ಗೌಡರನ್ನು ಸನ್ಮಾನಿಸಲಾಯಿತು. ಸಮ್ಮೇಳನವನ್ನು ಭತ್ತದ ತೆನೆಗೆ ಹಾಲೆರೆದು, ಗುಮ್ಮಟೆ ಬಾರಿಸಿ ಉದ್ಘಾಟಿಸಿದ ಮಾಹೆ ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಬುಡಕಟ್ಟು ಸಮುದಾಯಗಳಿಗೆ ಅನುಕಂಪ, ಕರುಣೆ ಬೇಡ; ಅವಕಾಶಗಳನ್ನು ಒದಗಿಸಿಕೊಡಬೇಕು. ಎಲ್ಲಕ್ಕೂ ಮುಖ್ಯವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಪರಿಸರ ನಾಶದಿಂದಾಗಿ ಭೂತಾಪಮಾನ ಹೆಚ್ಚುತ್ತಿದ್ದು, ವಾತಾವರಣದ ಉಷ್ಣತೆ ಏರಿಕೆಯಾಗುತ್ತಿದೆ. ಇದಕ್ಕಾಗಿ ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.

ಆದರೆ ಬುಡಕಟ್ಟು ಸಮುದಾಯ ತಮ್ಮ ಬದುಕಿನ ಉಸಿರಾದ ನಮ್ಮ ಕಾಡು, ನೆಲ-ಜಲವನ್ನು ಉಳಿಸಿ, ಬೆಳೆಸಿ ಅದರಲ್ಲೇ ತಮ್ಮ ಸಂಸ್ಕೃತಿಯೊಂದಿಗೆ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಪ್ರಕೃತಿಯೊಂದಿಗೆ ಜಗತ್ತಿನ ಸಂರಕ್ಷಣೆಗೆ ಬದ್ಧರಾಗಿದ್ದಾರೆ. ಈ ಮೂಲಕ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ನಾಶ ಬುಡಕಟ್ಟುಗಳ ಪ್ರವೃತ್ತಿಯಲ್ಲ: ಕಾಡು, ನದಿ, ವನಗಳ ಜೊತೆ ಜೊತೆಗೆ ಜೀವಿಸುವ ಬುಡಕಟ್ಟು ಜನಾಂಗ ಎಂದಿಗೂ ಅವುಗಳನ್ನು ನಾಶ ಮಾಡುವ ಪ್ರವೃತ್ತಿಯವರಲ್ಲ. ನಿಸರ್ಗದೊಂದಿಗೆ ಅನ್ಯೋನ್ಯತೆಯಿಂದಿರುವ ಕುಡುಬಿ, ಗೊಂಡ, ಕೊರಗರು, ಹಾಲಕ್ಕಿ ಒಕ್ಕಲಿಗದಂತಹ ಬುಡಕಟ್ಟು ಸಮುದಾಯಗಳು ಆಧುನಿಕತೆಯ ಭರಾಟೆಯಲ್ಲಿ, ಅಭಿವೃದ್ಧಿಯ ನೆಪದಲ್ಲಿ ಸಂಕಟದಲ್ಲಿವೆ. ಆದರೆ ಅವರ ಪ್ರಗತಿಯಾಗದೇ ಈ ನಾಡಿನ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ರೇಖಾ ಬನ್ನಾಡಿ ಹೇಳಿದರು.

ಭಂಡಾರ್‌ಕಾರ್ಸ್‌ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕ ಡಾ.ಶುಭಕರಾಚಾರಿ ವಂದಿಸಿದರು. ಉಪನ್ಯಾಸಕಿ ರೋಹಿಣಿ ಎಚ್. ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X