ಉಡುಪಿ; 403 ಮಂದಿಗೆ 158.92ಲಕ್ಷ ರೂ. ಸಾಲ ಸೌಲಭ್ಯ ವಿತರಣೆ

ಉಡುಪಿ, ಫೆ.26: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಡಿ.ದೇವರಾಜ ಅರಸು ಹಿಂದುಳಿದವರ್ಗಗಳ ಅಭಿವೃದ್ಧಿ ನಿಗಮ ಉಡುಪಿ ಜಿಲ್ಲೆ ಇದರ ವತಿಯಿಂದ 2017-18ನೆ ಸಾಲಿನ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 403 ಫಲಾನುಭವಿಗಳಿಗೆ 158.92ಲಕ್ಷ ರೂ. ಮೊತ್ತದ ಸಾಲ ಸೌಲಭ್ಯಗಳನ್ನು ವಿತರಿಸಲಾಯಿತು.
ಉಡುಪಿ ಶೋಕಾ ಮಾತಾ ಇಗರ್ಜಿಯ ಸಭಾಂಗಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸಾಲ ಸೌಲಭ್ಯಗಳ ಮಂಜೂರಾತಿ ಆದೇಶದ ಪ್ರತಿಯನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಿತರಿಸಿದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಶ್ರಮಶಕ್ತಿ ಯೋಜನೆಯಲ್ಲಿ 162 ಮಂದಿಗೆ 40.50ಲಕ್ಷ ರೂ., ಕಿರುಸಾಲದಲ್ಲಿ 24 ಮಂದಿಗೆ 2.40ಲಕ್ಷ ರೂ., ಸ್ವಯಂ ಉದ್ಯೋಗದಲ್ಲಿ ಆರು ಮಂದಿಗೆ 3.80ಲಕ್ಷ ರೂ., ಅರಿವು ಯೋಜನೆಯಲ್ಲಿ 121 ಮಂದಿಗೆ 47.57ಲಕ್ಷ ರೂ. ಮತ್ತು ಡಿ.ದೇವರಾಜ ಅರಸು ಹಿಂದುಳಿದವರ್ಗಗಳ ಅಭಿವೃದ್ಧಿ ನಿಗಮದ ವೈಯಕ್ತಿಕ ಸ್ವಯಂ ಉದ್ಯೋಗ ಸಾಲ ಯೋಜನೆಯಲ್ಲಿ 49 ಮಂದಿಗೆ 25ಲಕ್ಷ ರೂ., ಸಾಂಪ್ರದಾಯಿಕದಲ್ಲಿ 11 ಮಂದಿಗೆ 7.05ಲಕ್ಷ ರೂ., 4 ವಿಧವೆಯರಿಗೆ 1.60ಲಕ್ಷ ರೂ. ಆರ್ಥಿಕ ನೆರವು, ಸಾರಾಯಿ ಮಾರಾಟ ನಿಷೇಧದ 8 ಮಂದಿ ನಿರುದ್ಯೋಗಿಗಳಿಗೆ 4ಲಕ್ಷ ಆರ್ಥಿಕ ನೆರವು, ಗಂಗಾ ಕಲ್ಯಾಣದಲ್ಲಿ 18 ಮಂದಿಗೆ 27ಲಕ್ಷ ರೂ. ಸಾಲ ಸೌಲಭ್ಯಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಚರ್ಚ್‌ದ ಪ್ರಧಾನ ಧರ್ಮಗುರು ರೆ.ಫಾ.ವಲೇರಿ ಯನ್ ಮೆಂಡೋನ್ಸಾ, ನಗರಸಭೆ ನಾಮನಿರ್ದೇಶನ ಸದಸ್ಯ ಗಣೇಶ್ ನೆರ್ಗಿ, ಮಾಜಿ ಸದಸ್ಯ ಪ್ರಕಾಶ್ ಅಂದ್ರಾದೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀ್ ಪಡುಕೆರೆ ಉಪಸ್ಥಿತರಿದ್ದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಉಡುಪಿ ಜಿಲ್ಲಾ ವ್ಯವಸ್ಥಾಪಕ ಮುಹಮ್ಮದ್ ಸಫ್ವಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಡಿ.ದೇವರಾಜ ಅರಸು ಹಿಂದುಳಿದವರ್ಗಗಳ ಅಭಿವೃದ್ಧಿ ನಿಗಮದ ಸಹಾಯಕ ಅಭಿವೃದ್ಧಿ ಅಧಿ ಕಾರಿ ಮಂಜು ವಂದಿಸಿದರು.







