ಅಮೆರಿಕದಲ್ಲಿ ಮಳೆ, ಬಿರುಗಾಳಿಗೆ ಐವರು ಬಲಿ
ವಾಶಿಂಗ್ಟನ್, ಫೆ. 26: ಅಮೆರಿಕದ ಮಧ್ಯ ಭಾಗದಲ್ಲಿ ಸುರಿದ ಭಾರೀ ಮಳೆ, ಪ್ರವಾಹ ಹಾಗೂ ಬಿರುಗಾಳಿಗೆ ಬಲಿಯಾದವರ ಸಂಖ್ಯೆ ರವಿವಾರ 5ಕ್ಕೆ ಏರಿದೆ. ಬಿರುಗಾಳಿಯಿಂದಾಗಿ ಹಲವಾರು ಮನೆಗಳು ಧ್ವಂಸಗೊಂಡಿವೆ.
ಟೆಕ್ಸಾಸ್ನಿಂದ ಕೆನಡಿಯನ್ ಮ್ಯಾರಿಟೈಮ್ ರಾಜ್ಯಗಳವರೆಗಿನ ಪದೇಶದಲ್ಲಿ ಬಿರುಗಾಳಿಯ ಆಗಮನಕ್ಕೆ ಮುನ್ನ ಹಲವು ಬಾರಿ ಎಚ್ಚರಿಕೆಗಳನ್ನು ನೀಡಲಾಗಿತ್ತು.
ಮಧ್ಯ ಟೆನಸಿ ರಾಜ್ಯದ ಕ್ಲಾರ್ಕ್ಸ್ವಿಲ್ನಲ್ಲಿ ಶನಿವಾರ ಗಂಟೆಗೆ 120 ಮೈಲಿ ವೇಗದ ಬಿರುಗಾಳಿ ಬೀಸಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ರವಿವಾರ ಹೇಳಿದೆ.
Next Story