ಇಸ್ಪೀಟು ಜುಗಾರಿ: ಮೂವರ ಬಂಧನ
ಕುಂದಾಪುರ, ಫೆ.26: ಬಳ್ಕೂರು ಗ್ರಾಮದ ಕಳ್ಳಿಗುಡ್ಡೆ ಎಂಬಲ್ಲಿನ ಹಾಡಿಯಲ್ಲಿ ಫೆ.25ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಮೂವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಜಪ್ತಿಯ ಬಶೀರ್(35), ಬಳ್ಕೂರಿನ ಮಹೇಶ ಬಿ.(27), ಹೆರಿಬೈಲಿನ ಶರತ್(31) ಎಂದು ಗುರುತಿಸಲಾಗಿದೆ. ಬಳ್ಳೂರು ಕಳ್ಳಿಗುಡ್ಡೆಯ ಲಕ್ಷ್ಮಣ(29) ಎಂಬಾತ ಪರಾರಿಯಾಗಿದ್ದಾನೆ. ಬಂಧಿತರಿಂದ 26,600 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





