ಸಿರಿಯ: ಅಮೆರಿಕದ ವಾಯು ದಾಳಿ; 25 ನಾಗರಿಕರು ಮೃತ್ಯು

ಜಿನೇವ, ಫೆ. 26: ಪೂರ್ವ ಸಿರಿಯದಲ್ಲಿರುವ ಐಸಿಸ್ ಭಯೋತ್ಪಾದಕರ ನೆಲೆಗಳ ಮೇಲೆ ಅಮೆರಿಕ ನೇತೃತ್ವದ ಮಿತ್ರ ಪಡೆಗಳು ನಡೆಸಿದ ವಾಯುದಾಳಿಗಳಲ್ಲಿ ಕನಿಷ್ಠ 25 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಸೋಮವಾರ ಹೇಳಿದೆ.
ಇರಾಕ್ ಗಡಿ ಸಮೀಪದ ಅಲ್-ಶಾಫಹ್ ಗ್ರಾಮ ಹಾಗೂ ಸುತ್ತಮುತ್ತ ರವಿವಾರ ದಾಳಿ ನಡೆಸಲಾಯಿತು ಎಂದು ಅದು ತಿಳಿಸಿದೆ.
‘‘ರವಿವಾರ ಇಡೀ ದಿನ ನಡೆದ ವಾಯು ದಾಳಿಗಳಲ್ಲಿ ಏಳು ಮಕ್ಕಳು ಸೇರಿದಂತೆ 25 ನಾಗರಿಕರು ಅಲ್-ಶಾಫಹ್ ಗ್ರಾಮ ಮತ್ತು ಸುತ್ತಲಿನ ಮರುಭೂಮಿ ಪ್ರದೇಶಗಳಲ್ಲಿ ಮೃತಪಟ್ಟಿದ್ದಾರೆ’’ ಎಂದು ಬ್ರಿಟನ್‌ನಲ್ಲಿ ನೆಲೆಸಿರುವ ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದುಲ್ ರಹ್ಮಾನ್ ತಿಳಿಸಿದರು.
‘‘ಈ ಗ್ರಾಮವು ಪೂರ್ವ ಸಿರಿಯದಲ್ಲಿ ಐಸಿಸ್ ನಿಯಂತ್ರಣದಲ್ಲಿರುವ ಕೊನೆಯ ಪ್ರದೇಶವಾಗಿದೆ’’ ಎಂದರು.
Next Story





