ಕರ್ಣಾಟಕ ಬ್ಯಾಂಕ್‌ಗೆ ಐಬಿಎ ಬ್ಯಾಂಕಿಂಗ್ ಟೆಕ್ನಾಲಜಿ ಪುರಸ್ಕಾರ

ಮಂಗಳೂರು, ಫೆ.26: ಕರ್ಣಾಟಕ ಬ್ಯಾಂಕ್ ಪ್ರತಿಷ್ಠಿತ ‘ಐಬಿಎ ಬ್ಯಾಂಕಿಂಗ್ ಟೆಕ್ನಾಲಜಿ’ ಪುರಸ್ಕಾರ ಪಡೆದಿದ್ದು, ಮುಂಬೈಯಲ್ಲಿ ಫೆ.23ರಂದು ನಡೆದ ಐಬಿಎ ಬ್ಯಾಂಕಿಂಗ್ ಟೆಕ್ನಾಲಜಿ ಅವಾರ್ಡ್ ಸಮಾರಂಭದಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಅಜಯ್ ಪ್ರಕಾಶ್ ಸಾಹ್ನಿಯವರು ಬ್ಯಾಂಕಿನ ಮುಖ್ಯ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಭಟ್ ಎಂ ಹಾಗೂ ಪ್ರಧಾನ ವ್ಯವಸ್ಥಾಪಕ ಮಹಾಲಿಂಗೇಶ್ವರ ಕೆ. ಅವರಿಗೆ ಪುರಸ್ಕಾರ ಪ್ರದಾನ ಮಾಡಿದರು.
ಆರ್‌ಬಿಐ ಮಾಜಿ ಸಹಾಯಕ ಗವರ್ನರ್ ಆರ್.ಗಾಂಧಿ, ಕರ್ಣಾಟಕ ಬ್ಯಾಂಕ್‌ನ ಡಿಜಿಂಎ ರವಿಶಂಕರ್ ಎನ್.ಆರ್ ಈ ಸಂದರ್ಭ ಉಪಸ್ಥಿತರಿದ್ದರು.
ಸಣ್ಣ ಬ್ಯಾಂಕ್‌ಗಳ ವಿಭಾಗದಲ್ಲಿ ಕರ್ಣಾಟಕ ಬ್ಯಾಂಕ್ ಅತ್ಯುತ್ತಮ ಸಾಧನೆ ತೋರಿದ್ದು ‘ಟೆಕ್ನಾಲಜಿ ಬ್ಯಾಂಕ್ ಆಫ್ ದಿ ಇಯರ್’ ವಿಭಾಗ, ಡಿಜಿಟಲ್ ಹಾಗೂ ಚಾನೆಲ್ ತಂತ್ರಜ್ಞಾನದ ಅತ್ಯುತ್ತಮ ಬಳಕೆ ವಿಭಾಗ, ಅತ್ಯುತ್ತಮ ಪಾವತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ.
Next Story





