ಮದೀನಾದಲ್ಲಿ ಆಲಿಕಲ್ಲು ಮಳೆ; ವ್ಯಾಪಕ ಹಾನಿ

ಮದೀನಾ (ಸೌದಿ ಅರೇಬಿಯ), ಫೆ. 26: ಮದೀನಾ ಸೇರಿದಂತೆ ಪಶ್ಚಿಮ ಸೌದಿ ಅರೇಬಿಯದ ಹಲವು ಭಾಗಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ವ್ಯಾಪಕ ನಷ್ಟ ಸಂಭವಿಸಿದೆ.
ಮಂಜುಗಡ್ಡೆ ತುಂಡುಗಳು ವಾಹನಗಳ ಮೇಲೆ ಬಿದ್ದು ಗಾಜು ಒಡೆದಿರುವುದನ್ನು ತೋರಿಸುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಇತ್ತೀಚೆಗೆ ತೀವ್ರ ಪ್ರಮಾಣದ ಆಲಿಕಲ್ಲು ಮಳೆ ಸುರಿದಿದ್ದಾಗ, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಗಳಿಗೆ ರಜೆ ನೀಡಲಾಗಿತ್ತು.
ಮುಂದಿನ ದಿನಗಳಲ್ಲಿ ರಾಜಧಾನಿ ರಿಯಾದ್‌ನ ದಕ್ಷಿಣದ ಭಾಗಗಳು ಮತ್ತು ನಜ್ರನ್ ವಲಯದಲ್ಲಿ ದೃಗ್ಗೋಚರತೆ ಕಡಿಮೆಯಾಗಲಿದೆ ಎಂದು ಹವಾಮಾನ ಮುನ್ನೆಚ್ಚರಿಕೆ ತಿಳಿಸಿದೆ.
Next Story





