ಮೀನುಗಾರಿಕಾ ದೋಣಿಗೆ ಗುಂಡು; ಓರ್ವ ಫೆಲೆಸ್ತೀನ್ ಮೃತ್ಯು
ಜೆರುಸಲೇಂ, ಫೆ. 26: ಗಾಝಾ ಪಟ್ಟಿಯ ದೋಣಿಯೊಂದರ ಮೇಲೆ ರವಿವಾರ ಇಸ್ರೇಲ್ ಪಡೆಗಳು ಗುಂಡು ಹಾರಿಸಿ ಓರ್ವ ಫೆಲೆಸ್ತೀನ್ ವ್ಯಕ್ತಿಯನ್ನು ಕೊಂದಿವೆ. ಫೆಲೆಸ್ತೀನೀಯರಿಗೆ ಮೀನು ಹಿಡಿಯಲು ಅನುಮತಿಯಿರುವ ವಲಯದಿಂದ ದೋಣಿ ಹೊರಬಂದ ಬಳಿಕ ಗುಂಡು ಹಾರಿಸಲಾಗಿದೆ.
ಉತ್ತರ ಗಾಝಾ ಪಟ್ಟಿಯಲ್ಲಿರುವ ನಿಯೋಜಿತ ಮೀನುಗಾರಿಕಾ ವಲಯದಿಂದ ಬೇರೆಡೆಗೆ ತೆರಳಿದ ಬಳಿಕ ದೋಣಿಯತ್ತ ಗುಂಡು ಹಾರಿಸಲಾಗಿದೆ ಎಂದು ಇಸ್ರೇಲ್ ಸೇನೆಯ ವಕ್ತಾರರೊಬ್ಬರು ಹೇಳಿದರು.
‘‘ದೋಣಿಯಲ್ಲಿ ಮೂವರು ಇದ್ದರು. ಗಂಭೀರ ಗಾಯಗೊಂಡ ಓರ್ವ ಬಳಿಕ ಕೊನೆಯುಸಿರೆಳೆದಿದ್ದಾರೆ ಹಾಗೂ ಇಬ್ಬರು ‘ಶಂಕಿತ’ರನ್ನು ಬಂಧಿಸಲಾಗಿದೆ’’ ಎಂದರು.
Next Story





