ಮಂಗಳೂರು ವಿವಿ ಘಟಿಕೋತ್ಸವ: ಪವಿತ್ರಾಗೆ ಎರಡು ಚಿನ್ನದ ಪದಕ, ನಗದು ಪುರಸ್ಕಾರ

ಕೊಣಾಜೆ, ಫೆ. 26: ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಎಂ.ಎ ಪೂರೈಸಿದ್ದ ಪವಿತ್ರಾ.ಜಿ. ಅವರಿಗೆ ಸೋಮವಾರ ಮಂಗಳೂರು ವಿವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಎರಡು ಚಿನ್ನದ ಪದಕದೊಂದಿಗೆ ಮೂರು ನಗದು ಪುರಸ್ಕಾರ ಲಭಿಸಿದೆ.
ಸಿವಿಲ್ ಕಾಂಟ್ರಾಕ್ಟರ್ ನಾರಾಯಣ ನಾಯ್ಕಾ ಹಾಗೂ ಗುಣವತಿ ದಂಪತಿಯ ಪುತ್ರಿಯಾಗಿರುವ ಪವಿತ್ರಾ ತರಗತಿಯಲ್ಲಿ ಉಪನ್ಯಾಸಕರು ಕೊಡುತ್ತಿದ್ದ ಕ್ಲಾಸ್ ಪಾಯಿಂಟನ್ನೇ ಹೆಚ್ಚಾಗಿ ಅಂದೇ ಅಭ್ಯಾಸವನ್ನು ಬೆಳೆಸಿದ್ದರು. ಪಿಎಚ್‌ಡಿ ಮಾಡಿ ಉಪನ್ಯಾಕಿ ಆಗಬೇಕೆಂದು ಕನಸನ್ನು ಹೊತ್ತು ಕೊಂಡಿರುವ ಅವರು ಸದ್ಯಕ್ಕೆ ಕಾವೇರಿ ಕಾಲೇಜು ಗೋಣಿಕೊಪ್ಪಲಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಥಮ ರ್ಯಾಂಕ್ ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಇದೀಗ ಪ್ರಥಮ ರ್ಯಾಂಕ್ ಎರಡು ಚಿನ್ನದ ಪದಕ ಮೂರು ನಗದು ಪುರಸ್ಕಾರ ಲಭಿಸಿರುವುದು ಸಂತಸ ತಂದಿದೆ. ಪ್ರೋತ್ಸಾಹ ನೀಡಿದ ಪಾಲಕರು ಹಾಗೂ ಅದ್ಯಾಪಕರಿಗೆ ಕೃತಘ್ನನಾಗಿದ್ದೇನೆ ಎನ್ನುತ್ತಾರೆ ಪವಿತ್ರಾ.
Next Story





