ಮಂಗಳೂರು: ಫೆ.27ರಿಂದ ಸ್ಥಳದಲ್ಲೇ ಪಡಿತರ ಚೀಟಿ ವಿತರಣಾ ಅಭಿಯಾನ
ಮಂಗಳೂರು, ಫೆ. 26: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಪಿಎಲ್ ಪಡಿತರ ಚೀಟಿ ಅರ್ಜಿದಾರರಿಗೆ ಸ್ಥಳದಲ್ಲೇ ಪಡಿತರ ಚೀಟಿ ವಿತರಿಸುವ ಅಭಿಯಾನವು ಫೆ.27, 28 ಮತ್ತು ಮಾ.1ರಂದು ಮಹಾನಗರ ಪಾಲಿಕಾ ಕಚೇರಿ ಸುರತ್ಕಲ್, ಮಾ.3ರಂದು ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘ, ಮಾ.6ರಂದು ನೀರುಮಾರ್ಗ ಗ್ರಾಪಂ ಕಚೇರಿ, ಮಾ.7ರಂದು ಗಂಜಿಮಠ ಗ್ರಾಪಂ ಕಚೇರಿ, ಮಾ.8ರಂದು ಎಡಪದವು ಗ್ರಾಪಂ ಕಚೇರಿಯಲ್ಲಿ ಬೆಳಗ್ಗೆ 9:3ರಿಂದ ಸಂಜೆ 5:30ರವರೆಗೆ ನಡೆಯಲಿದೆ ಎಂದು ಶಾಸಕ ಬಿ.ಎ.ಮೊಯ್ದಿನ್ ಬಾವಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅರ್ಜಿದಾರರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಸ್ವೀಕೃತಿ ಪತ್ರದ ಪ್ರತಿ, ಕುಟುಂಬದ ಆದಾಯ ಪ್ರಮಾಣ ಪತ್ರದ ಪ್ರತಿ (ಅವಧಿ ಮೀರಿರಬಾರದು ಹಾಗೂ 18 ವಯಸ್ಸಿಗಿಂತ ಮೇಲ್ಪಟ್ಟ ಸದಸ್ಯರ ಹೆಸರಿನಲ್ಲಿರಬೇಕು), ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್‌ನ ನಕಲು ಪ್ರತಿ, ಕುಟುಂಬದ ಯಜಮಾನ ಅಥವಾ ಅರ್ಜಿಯಲ್ಲಿ ಹೆಸರಿರುವ ಒಬ್ಬ ಪ್ರೌಢ ಸದಸ್ಯರು ಖುದ್ದಾಗಿ ಹಾಜರಿದ್ದು ಬೆರಳಚ್ಚು ಹೊಂದಿಸಬೇಕು ಎಂದು ತಿಳಿಸಿದ್ದಾರೆ.
Next Story





