ನಂ.1 ಸ್ಥಾನ ವಶಪಡಿಸಿಕೊಂಡ ಹಾಲೆಪ್
ಡಬ್ಲ್ಯುಟಿಎ ರ್ಯಾಂಕಿಂಗ್

ಪ್ಯಾರಿಸ್, ಫೆ.26: ಕಳೆದ ವಾರ ನಡೆದ ದುಬೈ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದ ಹೊರತಾಗಿಯೂ ರೊಮಾನಿಯದ ಸಿಮೊನಾ ಹಾಲೆಪ್ ವಿಶ್ವದ ನಂ.1 ಆಟಗಾರ್ತಿ ಪಟ್ಟ ವಶಪಡಿಸಿಕೊಂಡಿದ್ದಾರೆ. ಹಾಲೆಪ್ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕರೊಲಿನ್ ವೋಝ್ನಿಯಾಕಿಯನ್ನು 2ನೇ ಸ್ಥಾನಕ್ಕೆ ತಳ್ಳಿ ಅಗ್ರ ಸ್ಥಾನ ಪಡೆದರು. ದುಬೈನಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ಗಾರ್ಬೈನ್ ಮುಗುರುಝ ಮೂರನೇ ಸ್ಥಾನದಲ್ಲೂ, ದುಬೈ ಚಾಂಪಿಯನ್ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ 4ನೇ ಸ್ಥಾನದಲ್ಲಿದ್ದಾರೆ.
Next Story





