ಮಾ.8ರೊಳಗೆ ದೇಶದ 200 ರೈಲ್ವೆ ನಿಲ್ದಾಣಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ ಯಂತ್ರಗಳ ಸ್ಥಾಪನೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಫೆ.27: ಅಂತರರಾಷ್ಟ್ರೀಯ ಮಹಿಳಾ ದಿನವಾದ ಮಾ.8ರೊಳಗೆ ದೇಶಾದ್ಯಂತ 200 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ ಯಂತ್ರಗಳು ಮತ್ತು ದಹನ ಯಂತ್ರಗಳನ್ನು ಸ್ಥಾಪಿಸಲು ಭಾರತೀಯ ರೈಲ್ವೆಯು ಸಜ್ಜಾಗಿದೆ.
ಕೈಗೆಟಕುವ ಬೆಲೆಗಳಲ್ಲಿ ಪರಿಸರ ಸ್ನೇಹಿ ಸ್ಯಾನಿಟರಿ ನ್ಯಾಪ್ಕಿನ್ಗಳ ತಯಾರಿಕೆಗಾಗಿ ರೈಲ್ವೆ ಮಹಿಳಾ ಕಲ್ಯಾಣ ಕೇಂದ್ರ ಸಂಸ್ಥೆಯು ದಿಲ್ಲಿಯ ಸರೋಜಿನಿ ನಗರ ರೈಲ್ವೆ ಕಾಲನಿಯಲ್ಲಿ ಆರಂಭಿಸಿರುವ ಉತ್ಪಾದನಾ ಘಟಕ ‘ದಸ್ತಕ್’ಗೆ ರವಿವಾರ ಭೇಟಿ ನೀಡಿದ್ದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು, ಇಂತಹ ಯೋಜನೆಗಳು ಹೆಚ್ಚಬೇಕು ಮತ್ತು ಸಾಮಾಜಿಕ ಉದ್ದೇಶದ ಇಂತಹ ಕಾರ್ಯಗಳಲ್ಲಿ ರೈಲ್ವೆ ಇಲಾಖೆಯು ಮುಂಚೂಣಿಯಲ್ಲಿರಬೇಕು ಎಂದು ಹೇಳಿದ್ದರು.
ಹೊಸದಿಲ್ಲಿ ಮತ್ತು ಭೋಪಾಲ ರೈಲ್ವೆ ನಿಲ್ದಾಣಗಳು ಹಾಗೂ ದೇಶಾದ್ಯಂತದ ಎಲ್ಲ ರೈಲ್ವೆ ಕಚೇರಿಗಳಲ್ಲಿ ಈಗಾಗಲೇ ಇಂತಹ ಯಂತ್ರಗಳನ್ನು ಸ್ಥಾಪಿಸಲಾಗಿದೆ.
Next Story