ಅಸ್ಪಶ್ಯತೆ ನಿವಾರಣೆಗೆ ಒಗ್ಗಟ್ಟಿನ ಪ್ರಯತ್ನ ಅಗತ್ಯ: ಡಾ.ಶಾಂತಾರಾಮ್
ರಾಜ್ಯಮಟ್ಟದ ಬುಡಕಟ್ಟು ಸಮ್ಮೇಳನ ಸಮಾರೋಪ

ಕುಂದಾಪುರ, ಫೆ. 27: ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ಹಾಗೂ ಅಸ್ಪೃಶ್ಯತೆ ನಿವಾರಣೆಗೆ ಎಲ್ಲ ವರ್ಗದವರು ಒಗ್ಗಟ್ಟಾಗಿ ಪ್ರಯತ್ನಿಸಬೇಕು ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಹೇಳಿದ್ದಾರೆ.
ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆದ ‘ಕರಾವಳಿ ಕರ್ನಾಟಕದ ಬುಡಕಟ್ಟುಗಳು ಹಾಗೂ ವರ್ತಮಾನ’ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವಕು ಮಾತನಾಡುತಿದ್ದರು.
ಆದಿವಾಸಿಗಳು, ಬುಡಕಟ್ಟು ಜನರ ಸಮಸ್ಯೆಗಳು ಯಾವುವು, ಸರಕಾರದಿಂದ ಸಿಗುವ ಸವಲತ್ತುಗಳೇನು ಎನ್ನುವ ಕುರಿತು ತಿಳಿಸಿಕೊಡಲು ಸರಕಾರದ ಪ್ರತಿನಿಧಿ ಗಳನ್ನು, ಅಧಿಕಾರಿಗಳನ್ನು ಆಹ್ವಾನಿಸಿದರೂ ಅವರು ಯಾವುದೇ ರೀತಿಯಲ್ಲಿ ಸ್ಪಂದಿಸದಿರುವುದು ಖೇಧನೀಯ. ಇದು ಆ ವರ್ಗದ ಜನರನ್ನು ಸರಕಾರ ನೋಡುವ ದೃಷ್ಟಿಕೋನವನ್ನು ಸೂಚಿಸುತ್ತದೆ. ಕೇವಲ ಪ್ರತ್ಯೇಕ ಪ್ರಾಧಿಕಾರ ಅಥವಾ ಇನ್ನು ಯಾವುದೇ ಇಲಾಖೆಗಳಿಂದ ಅವರ ಸಂಕಷ್ಟ ದೂರವಾಗಲು ಸಾಧ್ಯವಿಲ್ಲ ಎಂದವರು ಹೇಳಿದರು.
ಹಂಪಿ ಕನ್ನಡ ವಿವಿಯ ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕ ಡಾ. ವಿರೇಶ್ ಬಡಿಗೇರ್ ಮಾತನಾಡಿ, ಬುಡಕಟ್ಟು ಸಮುದಾಯದ ಜನ ಅವಿದ್ಯಾವಂತ ರಾದರೂ ಬದುಕಿನ ಅರಿವನ್ನು ತಿಳಿದಿದ್ದಾರೆ. ಆದರೆ ನಾವುಗಳು ಅಕ್ಷರ ಕಲಿತಿದ್ದರೂ, ಬದುಕಿನ ಅರಿವನ್ನು ಕಲಿತಿಲ್ಲ. ಅದಕ್ಕೆ ಸಮಸ್ಯೆಗಳು ಎದುರಾದಾಗ ಆತ್ಮಹತ್ಯೆಯಂತಹ ಹೇಯ ಕೃ್ಯಕ್ಕೆ ಮುಂದಾಗುತ್ತೇವೆ ಎಂದರು.
ಸಮ್ಮೇಳನಾಧ್ಯಕ್ಷೆ ಪದ್ಮಶ್ರೀ, ನಾಡೋಜ ಸುಕ್ರಿ ಬೊಮ್ಮಗೌಡ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ಸಮ್ಮೇಳನದ ಸಂಚಾಲಕ ಡಾ. ಶುಭಕರಾಚಾರಿ ಉಪಸ್ಥಿತರಿದ್ದರು. ಇದೇ ವೇಳೆ ಸಮ್ಮೇಳನದ ಕುರಿತು ಕಾಲೇಜಿನ ಪತ್ರಿಕೋದ್ಯಮ ವಿಭಾಗ ತಯಾರಿಸಿದ ಸಾಚಿತ್ರವನ್ನು ಪ್ರದರ್ಶಿಸಲಾಯಿತು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿ ದರು. ಸಮಾಜಶಾಸ ವಿಭಾಗದ ಪ್ರಾಧ್ಯಾಪಕ ರಾಮಚಂದ್ರ ವಂದಿಸಿದರು. ಉಪನ್ಯಾಸಕಿ ಪ್ರುಲ್ಲಾ ಪದ್ಮಶಾಲಿ ಕಾರ್ಯಕ್ರಮ ನಿರೂಪಿಸಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿ ದರು. ಸಮಾಜಶಾಸ ವಿಾಗದಪ್ರ್ಯಾಾಪಕ ರಾಮಚಂದ್ರ ವಂದಿಸಿದರು. ಉಪನ್ಯಾಸಕಿ ಪ್ರುಲ್ಲಾ ಪದ್ಮಶಾಲಿ ಕಾರ್ಯಕ್ರಮ ನಿರೂಪಿಸಿದರು.
ಬುಡಕಟ್ಟು: ಸಾಕ್ಷರತೆ ಶೇ.25ರಷ್ಟು ಮಾತ್ರ ದೇಶ ಹಾಗೂ ರಾಜ್ಯದಲ್ಲಿರುವ ಬುಡಕಟ್ಟು ಜನರ ಸಾಕ್ಷರತೆ ಪ್ರಮಾಣ ಹೆಚ್ಚು ಕಡಿಮೆ ಒಂದೇ ರೀತಿಯಿದೆ. ದೇಶದಲ್ಲಿ ಶೇ.8ರಷ್ಟು ಹಾಗೂ ರಾಜ್ಯದಲ್ಲೂ ಶೇ.8ರಷ್ಟು ಬುಡಕಟ್ಟು ಜನರಿದ್ದು, ಇವರಲ್ಲಿ ಕೇವಲ ಶೇ.25ರಷ್ಟು ಮಂದಿ ಮಾತ್ರ ಸಾಕ್ಷರರಾಗಿದ್ದಾರೆ. ಈ ಪ್ರಮಾಣ ಕರಾವಳಿ ಜಿಲ್ಲೆಗಳಲ್ಲಿ ಸುಧಾರಿಸಿದೆ. ಕರಾವಳಿಯಲ್ಲಿ ಶೇ.4ರಷ್ಟು ಆದಿವಾಸಿಗರಿದ್ದು, ಇವರಲ್ಲಿ ಸಾಕ್ಷರತೆಯ ಪ್ರಮಾಣ ಶೇ.80ರಷ್ಟಿದೆ. ಬಡತನ, ಶಿಕ್ಷಣ, ರಾಜಕೀಯ ನಿರ್ಲಕ್ಷದಂತಹ ಪ್ರಮುಖ ಸಮಸ್ಯೆಗಳಿಂದ ಈ ಸಮುದಾಯಗಳು ಇನ್ನೂ ಹೊರಬಂದಿಲ್ಲ. ಹಕ್ಕುಗಳ ಹೋರಾಟದೊಂದಿಗೆ ಸವುುದಾಯದ ಏಳಿಗೆಗೆ ಶ್ರಮಿಸಬೇಕಿದೆ.
-ಡಾ.ವಿನಯ್ ರಜತ್, ಮಂಗಳೂರು ವಿ.ವಿ. ಸಮಾಜಶಾಸ ವಿಭಾಗ ಮುಖ್ಯಸ್ಥರು







