ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ
ಕೋಟ, ಫೆ.27: ಸಾಸ್ತಾನ ಮಠತೋಟದ ನಿವಾಸಿ ಬಾಬು ಪೂಜಾರಿ (72) ಎಂಬವರು ಫೆ.24ರಂದು ಬೆಳಗ್ಗೆ 9:30ರ ಸುಮಾರಿಗೆ ಸಾಸ್ತಾನದ ಕ್ಲಿನಿಕ್‌ಗೆ ಹೋಗಿ ಅಲ್ಲಿಂದ ಬಾರಕೂರಿನಲ್ಲಿರುವ ಮಗಳ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಕುಂಭಾಶಿ ಗ್ರಾಮದ ಕೊರವಾಡಿಯ ಗಣೇಶ(23) ಎಂಬ ವರು ಫೆ.24ರಂದು ಅಪರಾಹ್ನ ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





