ಅಕ್ರಮ ಮರಳುಗಾರಿಕೆ: ಓರ್ವನ ಸೆರೆ, ವಾಹನ ವಶ
ಉಡುಪಿ, ಫೆ.27: ಯಡ್ತಾಡಿ ಗ್ರಾಮದ ಅಲ್ತಾರು ಹುಣ್ಸೆಕಟ್ಟೆ ಪರಿಸರದ ನೀರಿನ ತೋಡಿನಲ್ಲಿ ಫೆ.27ರಂದು ಬೆಳಗ್ಗೆ ಅಕ್ರಮ ಮರಳುಗಾರಿಕೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಒಬ್ಬರನ್ನು ಬಂಧಿಸಿ, ಮರಳು ಸಹಿತ ವಾಹನ ಹಾಗೂ ಇತರ ಸೊತ್ತು ಗಳನ್ನು ವಶಪಡಿಸಿಕೊಂಡಿದೆ.
ಬಂಧಿತನನ್ನು ಯಡ್ತಾಡಿ ಗ್ರಾಮದ ಸಂತೋಷ್ ಕಾಂಚನ್(37) ಎಂದು ಗುರುತಿಸಲಾಗಿದೆ. ಸಂತೋಷ್ ಕಾಂಚನ್, ಸಂಜೀವ ಶೆಟ್ಟಿ, ನರಸಿಂಹ ಮಡಿ ವಾಳ, ಪದ್ಮಯ್ಯ ಶೆಟ್ಟಿ ಎಂಬವರು ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಡಾ.ಎಚ್. ಎಸ್.ಮಹದೇಶ್ವರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, 2.5 ಲಕ್ಷ ರೂ. ಮೌಲ್ಯದ ಲಾರಿ, ಅದರಲ್ಲಿದ್ದ ಒಂದು ಮೆಟ್ರಿಕ್ ಟನ್ ಮರಳು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಸ್ಥಳದಲ್ಲಿದ್ದ ಸಂತೋಷ್ ಕಾಂಚನ್‌ನನ್ನು ಬಂಧಿಸಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





