1,500 ಅಪ್ರಚಲಿತ ನಿಯಮ ರದ್ದು: ಜಿತೇಂದ್ರ ಸಿಂಗ್

ಹೈದರಾಬಾದ್, ಫೆ.27: ದಾಖಲೆಪತ್ರಗಳನ್ನು ಗಝೆಟೆಡ್ ಅಧಿಕಾರಿಯಿಂದ ಪ್ರಮಾಣೀಕರಿಸುವುದು ಸೇರಿದಂತೆ ಸುಮಾರು 1,500 ಅಪ್ರಚಲಿತ(ಬಳಕೆಯಲ್ಲಿಲ್ಲದ) ನಿಯಮಗಳನ್ನು ಎನ್‌ಡಿಎ ಸರಕಾರ ರದ್ದುಗೊಳಿಸಿದೆ ಎಂದು ಪ್ರಧಾನಮಂತ್ರಿ ಸಚಿವಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಇದರಿಂದ ಸಮಯ ಹಾಗೂ ಮಾನವಶಕ್ತಿಯ ಉಳಿತಾಯವಾಗುವ ಕಾರಣ ರಾಜ್ಯ ಸರಕಾರಗಳೂ ಇದನ್ನು ಅನುಸರಿಸುವಂತೆ ಸಚಿವರು ಒತ್ತಾಯಿಸಿದರು. ದೇಶಕ್ಕೆ ಸ್ವಾತಂತ್ರ್ಯ ದೊರೆತ 70 ವರ್ಷದ ಬಳಿಕವೂ ನಿಮಗೆ ಪೆನ್ಷನ್ ಸಿಗಬೇಕಾದರೆ ನೀವು ಬದುಕಿರುವ ಬಗ್ಗೆ ಪ್ರಮಾಣ ಪತ್ರ ನೀಡಬೇಕಾಗಿದೆ. ಆದರೆ ಈಗ ನಾವು ಬಯೋಮೆಟ್ರಿಕ್ಸ್ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ . ಜೀವನಶೈಲಿ ಹಾಗೂ ಆಡಳಿತವನ್ನು ಸರಳಗೊಳಿಸುವುದು ಇ-ಆಡಳಿತದ ಮುಖ್ಯ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.
Next Story





