ಪ್ರತ್ಯೇಕ ಪ್ರಕರಣ: ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚನೆ
ಉಡುಪಿ, ಫೆ.27: ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಹಾಗೂ ಎಟಿಎಂನಿಂದ ಹಣ ಡ್ರಾ ಮಾಡುವ ಮೂಲಕ ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲೆವೂರು ಭವಾನಿ ನಗರದ ಸುಬ್ರಹ್ಮಣ್ಯ ಉಡುಪ(77) ಎಂಬವರು ಉಡುಪಿ ಎಸ್‌ಬಿಐ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು, ಫೆ.25ರಂದು ರಾತ್ರಿ ಯಿಂದ ಮರುದಿನ ಬೆಳಗ್ಗಿನ ಅವಧಿಯ ನಡುವೆ ಮಂಜುನಾಥ ಎಂಬ ಹೆಸರಿನ ವ್ಯಕ್ತಿಯು ಮೋಸದಿಂದ ಸುಬ್ರಹ್ಮಣ್ಯರ ಬ್ಯಾಂಕ್ ಖಾತೆಯಿಂದ 2 ಬಾರಿ ತಲಾ 40,000ರೂ. ಹಣವನ್ನು ತನ್ನ ಅಕೌಂಟ್ ವರ್ಗಾವಣೆ ಮಾಡಿಕೊಂಡಿದ್ದಾನೆ. ಅಲ್ಲದೆ 3 ಬಾರಿ ಒಟ್ಟು 79,600ರೂ. ನಗದು ಹಣವನ್ನು ಎಟಿಎಂ ಮೂಲಕ ಡ್ರಾ ಮಾಡಿದ್ದು, ಹೀಗೆ ಸುಬ್ರಹ್ಮಣ್ಯರಿಗೆ ಒಟ್ಟು 1,59,600ರೂ. ಮೋಸ ಮಾಡಲಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಎಟಿಎಂ ಮೂಲಕ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಹಣ ಡ್ರಾ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡುಬೆಳ್ಳೆ ಕಟ್ಟಿಂಗೇರಿಯ ಜೇನ್ ಸ್ವೀಡಲ್ ಲೋಬೋ(22) ಎಂಬವರು ಮೂಡುಬೆಳ್ಳೆ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದು, ಫೆ.25 ರಂದು ಯಾರೋ ವ್ಯಕ್ತಿಯು ಮೋಸದಿಂದ ಅವರ ಬ್ಯಾಂಕ್ ಖಾತೆಯಿಂದ 7 ಬಾರಿ ಒಟ್ಟು 25,090ರೂ. ಹಣವನ್ನು ರಾಮಮೂರ್ತಿ ನಗರ ಎಂಬಲ್ಲಿನ ಎಟಿಎಂ ಮೂಲಕ ಡ್ರಾ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.







